ಆರೋಗ್ಯಲೈಫ್ ಸ್ಟೈಲ್

ಹಲ್ಲಿನ ಸಮಸ್ಯೆ

ಪವಿತ್ರಾ ಶೆಟ್ಟಿ

ಕೊರೊನಾ ಬಂದ ಸಮಯದಲ್ಲಿ ಹಲ್ಲಿನ ಸಮಸ್ಯೆ ಇದ್ದವರು ಹೆಚ್ಚು ತೊಂದರೆ ಅನುಭವಿಸಿದರು. ಏಕೆಂದರೆ ಬಾಯಿಂದ ಹೆಚ್ಚಾಗಿ ಹರಡುತ್ತಿದ್ದ ವೈರಸ್ ಭೀತಿ ಎಲ್ಲರನ್ನೂ ವೈದ್ಯರ ಬಳಿ ತೆರಳದಂತೆ ಮಾಡಿತು. ಹಾಗಿದ್ದರೆ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಹೇಗೆ?

ದಿನಕ್ಕೆರಡು ಬಾರಿ ಪೇಸ್ಟ್ ಹಾಕಿ ಬ್ರಶ್ ಮಾಡುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತದೆ ಎಂಬುದು ನಿಮಗೆ ತಿಳಿದಿದೆ. ಆದರೆ ಪೇಸ್ಟ್ ನ ಪ್ರಮಾಣ ಎಷ್ಟಿರಬೇಕು? ಟಿವಿ ಜಾಹಿರಾತುಗಳಲ್ಲಿ ತೋರಿಸಿದಂತೆ ಇರುವಷ್ಟು ಉದ್ದಕ್ಕೂ ಪೇಸ್ಟ್ ಹಚ್ಚ ಬೇಕಿಲ್ಲ. ಸ್ವಲ್ಪ ಪೇಸ್ಟ್ ನಿಮ್ಮ ಇಡೀ ಬಾಯಿಯ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ. ಅದರಲ್ಲೂ ಮಕ್ಕಳಿಗೆ ಕೊಡುವಾಗ ಅದರ ಅರ್ಧಭಾಗದಷ್ಟು ಹಾಕಿದರೆ ಸಾಕು. ಏಕೆಂದರೆ ಮಕ್ಕಳು ಪೇಸ್ಟನ್ನು ತಿನ್ನುವ ಸಂದರ್ಭಗಳೇ ಜಾಸ್ತಿ.

ಇನ್ನು ಮನೆಮಂದಿಯ ಬ್ರಷ್ ಗಳನ್ನು ಒಂದೆಡೆ ಸಂಗ್ರಹಿಸುವಾಗ ಒಂದಕ್ಕೊಂದು ತಾಕದಂತೆ ನೋಡಿಕೊಳ್ಳಿ. ಬ್ರಷ್ ಕ್ಯಾಪ್ ಹಾಕಿಡುವುದು ಉತ್ತಮ. ಇಲ್ಲವಾದರೆ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡೀತು.

ಆದಷ್ಟು ರಾಸಾಯನಿಕ ಬೆರೆತ ಪೇಸ್ಟ್ ಗಳನ್ನು ಬಳಸುವ ಬದಲು ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಪೇಸ್ಟ್ಗೆ ಆದ್ಯತೆ ನೀಡಿ. ಬ್ರಷ್ ಮಾಡುವ ಸಮಯವನ್ನು ಎರಡರಿಂದ ಮೂರು ನಿಮಿಷಕ್ಕೆ ಸೀಮಿತಗೊಳಿಸಿ.

Spread the love

Related Articles

Leave a Reply

Your email address will not be published. Required fields are marked *

Back to top button