ಹುಬ್ಬಳ್ಳಿ - ಧಾರವಾಡ

ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡನ ಸೋದರ ಸಂಬಂಧಿ ಹತ್ಯೆ; ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಅಧಿಕಾರಿಗಳ ಭೇಟಿ

ಹುಬ್ಬಳ್ಳಿ: ಬಿಜೆಪಿ ಸ್ಥಳಿಯ ಮುಖಂಡನ ಸಹೋದರ ಸಂಬಂಧಿಯ ಯುವಕನನ್ನು ಮಾರಕಾಸ್ತ್ರಗಳಿಂದು ಇರಿದು ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ತಡ ಸಂಜೆ ನಡೆದಿದೆ. ಇನ್ನೂ ಹತ್ಯೆ ಹಿಂದೆ ಹಳೆ ವೈಷಮ್ಯ ಕೇಳಿಬರುತ್ತಿದೆ.

ಹುಬ್ಬಳ್ಳಿಯ ಗೋಪನಕೊಪ್ಪ ಬಳಿ ಘಟನೆ ನಡೆದಿದ್ದು, ಅಭಿಷೇಕ ಪಾಟೀಲ್ ಹತ್ಯೆಯಾದ ಯುವಕ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳ ಅಟಹಾಸಕ್ಕೆ ಬಲಿಯಾದ ಯುವಕನ್ನು, ಧಾರವಾಡ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ ಅವರ ಸಹೋದರ ಸಂಬಂಧಿಯಾಗಿದ್ದಾನೆ. ಅಭಿಷೇಕ ಪಾಟೀಲ್‌ನ ಎದ್ದೆಯ ಭಾಗಕ್ಕೆ ಬಲವಾಗಿ ಇರಿಯಲಾಗಿದ್ದು, ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ.

ಸಿದ್ಧರಾಮನಗರದ ಪ್ರದೀಪ ಎಂಬುವವರ ತಂಡದಿಂದಲೇ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಹಿಂದೆಯೂ ಅಭಿಷೇಕ ಪಾಟೀಲನ ಮನೆಗೆ ಬಂದು ಕಾರಿನ ಗಾಜನ್ನ ಇದೇ ತಂಡದವರು ಒಡೆದು ಹೋಗಿದ್ದರು ಎನ್ನುವ ಆರೋಪವು ಕೇಳಿ ಬರುತ್ತಿದೆ. ಇನ್ನೂ ಘಟನೆ ಮಾಹಿತಿ ಮೇರೆಗೆ ಸ್ಥಳಕ್ಕೆ ಕೇಶ್ವಾಪುರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ಕೈಗೊಂಡಿದ್ದಾರೆ.‌

ಇನ್ನೂ ಯುವಕನ ಸಾವಿನ ಸುದ್ದಿ ತಿಳಿಯುತ್ತಿದಂತೆ ಬಿಜೆಪಿಯ ಸ್ಥಳಿಯ ಮುಖಂಡರು, ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಜೊತೆಗೆ ಡಿಸಿಪಿ ಕೆ.ರಾಮರಾಜನ್ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡರು.‌

Spread the love

Related Articles

Leave a Reply

Your email address will not be published. Required fields are marked *

Back to top button