Breaking NewsLatestಇತರ ಕ್ರೀಡೆಕ್ರೀಡೆ
ಅರ್ಜೆಂಟೀನಾಕ್ಕೆ ಕೊಪಾ ಅಮೆರಿಕಾ ಫುಟ್ಬಾಲ್ ಕಿರೀಟ

ಯೋ ಡಿ ಜನೈರೊ: ಏಂಜಲ್ ಡಿ ಮಾರಿಯಾ 22ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲು ಅರ್ಜೆಂಟೀನಾ ಫುಟ್ಬಾಲ್ ತಂಡದ ಭವಿಷ್ಯವನ್ನೇ ಬದಲಾಯಿಸಿತು. 28 ವರ್ಷಗಳ ಬಳಿಕ ಅರ್ಜೆಂಟೀನಾ ತಂಡ ಕೊಪಾ ಅಮೆರಿಕ ಫುಟ್ಬಾಲ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
ಮೆಸ್ಸಿಗೆ ಅರ್ಜೆಂಟೀನಾ ಪರ ಯಾವುದೇ ಪ್ರಮುಖ ಟೂರ್ನಿ ಗೆಲ್ಲಲಾಗಲಿಲ್ಲ ಎಂಬ ಟೀಕೆಯ ಮಾತಿಗೆ ಇನ್ನು ಕೊನೆ. ಟೂರ್ನಿಯಲ್ಲಿ ಅತಿ ಹೆಚ್ಚು ಗೋಲುಗಳಿಸಿದ ನಾಯಕ ಮೆಸ್ಸಿಗೆ ಸರಣಿಶ್ರೇಷ್ಠ ಗೌರವ. ಬ್ರೆಜಿಲ್ ಅತ್ಯಂತ ಬಲಿಷ್ಠ ತಂಡ. ಆದರೆ ಮೆಸ್ಸಿಯ ಜಯವನ್ನುಈ ಬಾರಿ ಯಾರಿಂದಲೂ ಕಸಿಯಲಾಗಲಿಲ್ಲ.
ಅರ್ಜೆಂಟೀನಕ್ಕಾಗಿ ಪ್ರಶಸ್ತಿ ಗೆಲ್ಲಲಾಗಿಲ್ಲ ಎಂದು ಬೇಸತ್ತು ಒಮ್ಮೆ ರಾಜೀನಾಮೆಗೂ ಮುಂದಾಗಿದ್ದರು. ಆದರೆ ಈಗ ಅರ್ಜೆಂಟೀನಾದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
