Breaking Newsಉತ್ತರ ಕನ್ನಡಜಿಲ್ಲಾ ಸುದ್ದಿ

ಮುರುಡೇಶ್ವರ: ಸಮುದ್ರದಲ್ಲಿ ಈಜಲು ಹೋಗಿ ಇಬ್ಬರು ಪ್ರವಾಸಿಗರು ನೀರು ಪಾಲು

ಕಾರವಾರ : ಮುರುಡೇಶ್ವರ​​ ಪ್ರವಾಸಕ್ಕೆ ಬಂದಿದ್ದ ನಾಲ್ವರು ಯುವಕರು ಸಮುದ್ರದಲ್ಲಿ ಈಜಲು ಹೋಗಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟು, ಇನ್ನೋರ್ವ ನಾಪತ್ತೆಯಾದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಸಮುದ್ರ ತೀರದಲ್ಲಿ ಸಂಭವಿಸಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಾಸೂರು ನಿವಾಸಿಗಳಾದ ಮಣಿ, ನಾಗರಾಜ, ಮಂಜುನಾಥ ಹಾಗೂ ಪ್ರವೀಣ ಬಂಡೆ ಎಂಬವರು ಮುರ್ಡೇಶ್ವರ ಪ್ರವಾಸಕ್ಕೆಂದು ಬಂದಿದ್ದರು.

ಭಾನುವಾರ ಸಾಯಂಕಾಲದ ಹೊತ್ತಿಗೆ ಈಜಲು ಸಮುದ್ರಕ್ಕೆ ಇಳಿದ ಸಂದರ್ಭದಲ್ಲಿ ಮಣಿ, ನಾಗರಾಜ ಎಂಬುವವರು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದು, ಮಣಿಯ ಮೃತದೇಹ ಸಮುದ್ರದ ದಡಕ್ಕೆ ತೇಲಿಕೊಂಡು ಬಂದಿದ್ದರೆ, ನಾಗರಾಜ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ.ಇನ್ನಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button