Breaking NewsLatestರಾಜ್ಯರಾಷ್ಟ್ರೀಯ

ವ್ಯಾಕ್ಸಿನೇಷನ್ ಕೊರತೆ ಹೆಚ್ಚಿಲ್ಲದ 5 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ; ಪ್ರಮಾಣ ಶೇ.30

ನವದೆಹಲಿ: ವ್ಯಾಕ್ಸಿನೇಷನ್ ಕೊರತೆಯು ತೀರಾ ಹೆಚ್ಚಿಲ್ಲದ ಮೊದಲ ಐದು ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದ್ದು, ಶೆ. 30ರಷ್ಟು ಕೊರತೆ ಇದೆ.

ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ವಿಶ್ಲೇಷಣೆಯಂತೆ, ಕೇರಳ ಮತ್ತು ದೆಹಲಿಯಲ್ಲಿ ಕೋವಿಡ್ ವ್ಯಾಕ್ಸಿನೇಷನ್‌ನಲ್ಲಿ ಕಡಿಮೆ ಕೊರತೆಯಿದೆ. ಇದೇ ವೇಳೆ, ಬಿಹಾರ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಕೊರತೆಯಿದೆ. ಆಯಾ ರಾಜ್ಯದಲ್ಲಿನ ಕೊರತೆಯನ್ನು ಅದರ ಜನಸಂಖ್ಯೆಯ ಶೇಕಡಾವಾರು ಎಂದು ಲೆಕ್ಕಹಾಕಲಾಗುತ್ತದೆ.

ವ್ಯಾಕ್ಸಿನೇಷನ್ ಕೊರತೆ ಹೆಚ್ಚಿಲ್ಲದ ರಾಜ್ಯಗಳಲ್ಲಿ ಕೇರಳ ಮತ್ತು ದೆಹಲಿಯಲ್ಲಿ ವ್ಯಾಕ್ಸಿನೇಷನ್ ಗುರಿ ಕೊರತೆಯು ಶೇ. 22ರಷ್ಟಿದ್ದರೆ, ಪಂಜಾಬ್‌ನಲ್ಲಿ ಶೇ. 26, ಕರ್ನಾಟಕದಲ್ಲಿ ಶೇ. 30 ಮತ್ತು ಗುಜರಾತ್​ನಲ್ಲಿ ಶೇ. 37ರಷ್ಟಿದೆ. ವ್ಯಾಕ್ಸಿನೇಷನ್ ಕೊರತೆ ಹೆಚ್ಚಿಲ್ಲದ ಮೊದಲ ಐದು ರಾಜ್ಯಗಳಿವು.

ಕೇರಳ ಮತ್ತು ದೆಹಲಿ ಅತ್ಯುತ್ತಮ ವ್ಯಾಕ್ಸಿನೇಷನ್ ದಾಖಲೆಯ ರಾಜ್ಯಗಳಾಗಿ ಎದ್ದುಕಾಣುತ್ತಿದ್ದರೂ, ಡಿಸೆಂಬರ್ ವೇಳೆಗೆ 60 ಪ್ರತಿಶತದಷ್ಟು ಜನರಿಗೆ ಲಸಿಕೆ ನೀಡುವ ಗುರಿ ದರವನ್ನು ತಲುಪಲು ಅವು ಬಹಳ ದೂರದಲ್ಲಿವೆ.

ಬಿಹಾರದಲ್ಲಿ ಶೇ. 71ರಷ್ಟು, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ. 66ರಷ್ಟು ವ್ಯಾಕ್ಸಿನೇಷನ್ ಕೊರತೆಯಿದೆ. ಉತ್ತರ ಪ್ರದೇಶದಲ್ಲಿ ವ್ಯಾಕ್ಸಿನೇಷನ್ ಕೊರತೆಯು ಶೇ. 64ರಷ್ಟಿದೆ. ವ್ಯಾಕ್ಸಿನೇಷನ್ ವಿಚಾರದಲ್ಲಿ ಜಾರ್ಖಂಡ್ ಶೇ. 62ರಷ್ಟು ಹಿಂದುಳಿದಿದೆ. ಇವು ಅತಿ ಹೆಚ್ಚು ಕೊರತೆ ಎದುರಿಸುತ್ತಿರುವ 5 ರಾಜ್ಯಗಳಾಗಿವೆ.

ದೇಶದ ಒಟ್ಟಾರೆ ವ್ಯಾಕ್ಸಿನೇಷನ್ ಕೊರತೆ ಶೇ. 54 ಎಂಬುದು ತಿಳಿದುಬಂದಿದೆ. 59 ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಕೆಲವು ದೊಡ್ಡ ರಾಜ್ಯಗಳು ತಮ್ಮ ದೈನಂದಿನ ವ್ಯಾಕ್ಸಿನೇಷನ್‌ನಲ್ಲಿ ಅತಿ ಕೆಟ್ಟ ಸ್ಥಿತಿ ಎದುರಿಸುತ್ತಿವೆ.

ದೇಶದ ಒಟ್ಟು ವ್ಯಾಕ್ಸಿನೇಷನ್ ವ್ಯಾಪ್ತಿ 36 ಕೋಟಿ ದಾಟಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. 18-44 ವಯಸ್ಸಿನ ಜನರಿಗೆ 11 ಕೋಟಿಗೂ ಅಧಿಕ ಪ್ರಮಾಣವನ್ನು ನೀಡಲಾಗಿದೆ ಎಂದು ಅದು ಹೇಳಿದೆ.

ಜಗತ್ತಿನಾದ್ಯಂತ ಹೆಚ್ಚು ಹೆಚ್ಚು ಕೊರೋನಾ ವೈರಸ್ ರೂಪಾಂತರಗಳು ಕಾಣಿಸಿಕೊಳ್ಳುತ್ತಿರುವುದರಿಂದ ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ. ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ರೂಪಾಂತರವು ಹೆಚ್ಚು ಸಾಂಕ್ರಾಮಿಕ ತಳಿಗಳಲ್ಲಿ ಒಂದಾಗಿದ್ದು, ಇತರ ರಾಷ್ಟ್ರಗಳಲ್ಲಿ ಎಚ್ಚರಿಕೆ ಮೂಡಿಸಿದೆ.

Related Articles

Leave a Reply

Your email address will not be published. Required fields are marked *

Back to top button