ಕಾಂಗ್ರೆಸ್ನಲ್ಲಿ ಐದು ಜಾತಿಗೆ ಐವರು ಸ್ವಯಂಘೋಷಿತ ಸಿಎಂಗಳಿದ್ದಾರೆ: ಸಚಿವ ಈಶ್ವರಪ್ಪ

ಮೈಸೂರು: ಕಾಂಗ್ರೆಸ್ನಲ್ಲಿ ಐದು ಜಾತಿಗೆ ಐವರು ಸ್ವಯಂಘೋಷಿತ ಮುಖ್ಯಮಂತ್ರಿಗಳಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಚುನಾವಣೆಯೇ ನಡೆದಿಲ್ಲ, ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಮಹಾಭಾರತದಲ್ಲಿ ಶ್ರೀಕೃಷ್ಣ ಆದರ್ಶ. ಆದರೆ, ಕಾಂಗ್ರೆಸ್ನಲ್ಲಿ ಪಂಚ ಪಾಂಡವರು. ಐದು ಜಾತಿಗೆ ಒಬ್ಬೊಬ್ಬ ಮುಖ್ಯಮಂತ್ರಿ. ಅವರು ಸ್ವಯಂಘೋಷಿತ ಮುಖ್ಯಮಂತ್ರಿಗಳು. ಚುನಾವಣೆ ನಂತರ ಅವರನ್ನು ಹುಡುಕಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಪರಮೇಶ್ಚರ್ನ ನಾನು ಸೋಲಿಸಲಿಲ್ಲ ಅಂತ ಸಿದ್ದರಾಮಯ್ಯ ಹೇಳಲಿ. ಸಿದ್ದರಾಮಯ್ಯನ ನಾನು ಸೋಲಿಸಲಿಲ್ಲ ಅಂತ ಪರಮೇಶ್ವರ್ ಹೇಳಲಿ. ಇಬ್ಬರೂ ಹೇಳಿದಂತೆ ನಾನು ಕೇಳುತ್ತೇನೆ. ಸಿದ್ದರಾಮಯ್ಯ ಕಾಂಗ್ರೆಸ್ಗೆ ನಾನು ಸೊಸೆ. ಸೊಸೆ ಕೈಗೆ ಕೀ ಕೊಟ್ಟರಲ್ಲ ಎನ್ನುತ್ತಾರೆ. ಕಾಂಗ್ರೆಸ್ಗೂ ಸೊಸೆ, ಬಾದಾಮಿಗೂ ಸೊಸೆ. ಆದರೆ ಯಾವ ಪಕ್ಷಕ್ಕೆ ಮಗ ನೀವು ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದಲ್ಲಿ ಅಪ್ಪ ಅಮ್ಮ ಇದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಈ ರೀತಿ ಇಲ್ಲ. ವಿಶ್ವನಾಥ್ ಮಾತನಾಡುತ್ತಿರುವುದು ಸಿದ್ದರಾಮಯ್ಯ ಚಾಹೆಯಿಂದ. ಸ್ವಪಕ್ಷಕ್ಕೆ ಸಿದ್ದರಾಮಯ್ಯ ರೆ ವಿಲನ್. ಪಕ್ಷದೊಳಗೆ ಇದ್ದುಕೊಂಡು ಸಿದ್ದರಾಮಯ್ಯ ಆಟ ಆಡುತ್ತಿದ್ದಾರೆ. ಇದೆ ಚಾಹೆ ವಿಶ್ವನಾಥ್ ರಲ್ಲು ಉಳಿದುಕೊಂಡಿದೆ. ಬಿಜೆಪಿಯನ್ನ ಶಿಸ್ತಿನ ಪಕ್ಷ ಅಂದ್ರು ವಿಶ್ವನಾಥ್ ಮಾತನಾಡುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
