Breaking Newsಚಿಕ್ಕಮಗಳೂರುಜಿಲ್ಲಾ ಸುದ್ದಿ
ಅನಾಥ ಮಕ್ಕಳ ಶಿಕ್ಷಣಕ್ಕೆ ಶಾಸಕ ರಾಜೇಗೌಡ ನೆರವು

ಚಿಕ್ಕಮಗಳೂರು: ಎನ್ ಆರ್ ಪುರ ತಾಲೂಕಿನ ಮಾಗುಂಡಿ ಸಮೀಪದ ಮಹಲ್ಗೋಡು ಗ್ರಾಮದಲ್ಲಿ ಸುಮಾರು 8 ವರ್ಷಗಳ ಹಿಂದೆಯೇ ತಂದೆಯನ್ನು ಕಳೆದುಕೊಂಡು, ತಾಯಿಯೂ ನಾಪತ್ತೆಯಾಗಿ ಮೂರು ಮಕ್ಕಳು ಅನಾಥರಾಗಿರುವುದರಿಂದ ಈ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ಶಾಸಕ ಟಿ.ಡಿ.ರಾಜೇಗೌಡ ಭರವಸೆ ಕೊಟ್ಟಿದ್ದಾರೆ.
ಮೊದಲನೇ ಮಗಳು ನಿಶ್ಚಿತಾ ಎಸ್ಸೆಸ್ಸೆಲ್ಸಿಯಲ್ಲಿ ಶೇ.79 ಅಂಕ ಗಳಿಸಿದ್ದು, ಈಕೆಯೇ ದುಡಿದು ಇಬ್ಬರು ತಮ್ಮಂದಿರನ್ನು ಸಂಕಷ್ಟ ಹೊತ್ತು ಸಲಹುವ ಪರಿಸ್ಥಿತಿಯಾಗಿದೆ. ಈ ವಿಷಯ ಗೊತ್ತಾದ ಶಾಸಕ ಟಿ.ಡಿ.ರಾಜೇಗೌಡ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣಕ್ಕೆ ತಾವು ನೆರವು ನೀಡುವುದಾಗಿ ತಿಳಿಸಿದ್ದಾರೆ.
