Breaking NewsLatestಉಡುಪಿ

ಸಚಿವೆಯಾದದ್ದಕ್ಕೆ ಶೋಭಾ ಅವರನ್ನು ಉಡುಪಿಯಲ್ಲಿ ಅಭಿನಂದಿಸಿದ್ದು ಬಿಜೆಪಿಯಲ್ಲ, ಕಾಂಗ್ರೆಸ್!

ಉಡುಪಿ: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆಯಾಗಿದ್ದಾರೆ. ಆದರೆ ಅವರ ಕ್ಷೇತ್ರದಲ್ಲೂ ಬಿಜೆಪಿ ಈ ಬಗ್ಗೆ ಸಂಭ್ರಮಿಸುತ್ತಿಲ್ಲ. ಬಿಜೆಪಿಯ ಯಾರೂ ಅವರಿಗೆ ಅಭಿನಂದನೆ ಸಲ್ಲಿಸಿದ್ದರ ಬಗ್ಗೆ ವರದಿಯಾಗಿಲ್ಲ.

ಅಶೋಕ್​ ಕುಮಾರ್ ಕೊಡವೂರು

ಈ ನಡುವೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್​ ಕುಮಾರ್ ಕೊಡವೂರು ಅವರು ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ತಿಳಿಸಿ ಶುಭಾಶಯ ಕೋರಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಂದ ಒಳ್ಳೆಯ ಕೆಲಸಗಳು ನಡೆಯಲಿ ಎಂದು ಅವರು ಆಶಿಸಿದ್ದಾರೆ.

ಶೋಭಾ ಕರಂದ್ಲಾಜೆ ಮಾಡುವ ಒಳ್ಳೆಯ ಕೆಲಸಗಳಿಗೆ ಬೆಂಬಲವಿದೆ. ಕರ್ತವ್ಯಲೋಪ ಮಾಡಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದೂ ಅವರು ಹೇಳಿರುವ ಅವರು, ಸದಾನಂದ ಗೌಡರನ್ನು ಹುದ್ದೆಯಿಂದ ಇಳಿಸಿದ್ದನ್ನು ನೆನಪಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button