ಅಮಿತಾಭ್ ಮನೆ ಮಟಾಶ್?

ಪೂರ್ಣ ವಿ-ರಾಮ
ರಸ್ತೆ ಅಗಲೀಕರಣದ ಕಾರಣಕ್ಕೆ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮನೆ ಮಟಾಶ್ ಆಗಲಿದೆಯಾ?
ಹೌದು ಎನ್ನುತ್ತಿದೆ ಮುಂಬಯಿ ಮೂಲ. ಈಗಾಗಲೇ ಬೃಹತ್ ಮುಂಬೈ ಮಹಾನಗರ ಪಾಲಿಕೆ ಬಿಗ್ ಬಿಗೆ ನೋಟೀಸ್ ಜಾರಿಮಾಡಿದ್ದು, ಮನೆಯ ಒಂದು ಭಾಗ ಕೆಡಗಬೇಕಾದ ಅನಿವಾರ್ಯತೆ ಇದೆ ಎಂದಿದೆ!
ಸಂತ ಜ್ಞಾನೇಶ್ವರದಲ್ಲಿದೆ ಸ್ವಂತ ಮನೆ!
ಅಮಿತಾಭ್ ಮೊಟ್ಟಮೊದಲ ಬಾರಿಗೆ ಮುಂಬೈನಲ್ಲಿ ಖರೀದಿ ಮಾಡಿದ ಮನೆಯ ಹೆಸರು-ಪ್ರತೀಕ್ಷಾ! ಆ ಮನೆ ಎಂದರೆ ಬಿಗ್ ಬೀಗೆ ಏನೋ ಎಮೋಷನ್. ಏನೋ ಅಟ್ಯಾಚ್ ಮೆಂಟ್. ಅದೇ ಅದ್ದೂರಿ ಬಂಗಲೆಯ ಒಂದು ಪ್ರಮುಖ ಭಾಗ ಇದೀಗ ನೆಲಸಮವಾಗಲಿದ್ದು, ಬಿಗ್ ಬಿ ಈ ಬಗ್ಗೆ ತುಂಬು ಬೇಸರದಲ್ಲಿ ಇದ್ದಾರೆ ಎನ್ನಲಾಗುತ್ತಿದೆ!
2017ರಲ್ಲೇ ನೋಟೀಸಿಟ್ಟಿತ್ತು ಪಾಲಿಕೆ!
ಈ ಹಿಂದೆಯೇ ರಸ್ತೆ ಅಗಲೀಕರಣದ ವಿಷಯಕ್ಕೆ ಅಮಿತಾಭ್ ಅವರಿಗೆ 2017ನಲ್ಲೇ ನೋಟೀಸ್ ಕಳಿಸಿತ್ತು.ಆದರೆ ಅದು ಕಾರಣಾಂತರಗಳಿಂದ ಅಲ್ಲಿಗೇ ನಿಂತಿತ್ತು. ರಸ್ತೆ ಅಗಲೀಕರಣದ ಬಗ್ಗೆ ಒಂದಷ್ಟು ಗೊಂದಲಗಳು ಇತ್ತು. ಈಗ ಅವೆಲ್ಲಾ ಬಗೆಹರಿದಿದ್ದು, ಅಗಲೀಕರಣ ಪ್ರಕ್ರಿಯೆ ಕನ್ ಫರ್ಮ್ ಆಗಿದೆ. ಅಧಿಕಾರಿಗಳು ಇನ್ನೇನು ಕೆಲವೇ ದಿನಗಳಲ್ಲಿ ಅಮಿತಾಭ್ ಮನೆಯ ಒಂದು ಭಾಗವನ್ನು ನೆಲಸಮ ಮಾಡಲಿದ್ದಾರೆ!




