Breaking Newsಕ್ರಿಕೆಟ್ಕ್ರೀಡೆ

ನವೆಂಬರ್ 16ರಿಂದ ರಣಜಿ ಕ್ರಿಕೆಟ್ ಆರಂಭ

ಮುಂಬೈ : ಕೋವಿಡ್ ನಿಂದಾಗಿ ಕಳೆದ ಋತುವಿನಲ್ಲಿ ಸ್ಥಗಿತಗೊಂಡಿದ್ದ ರಣಜಿ ಪಂದ್ಯಗಳು ನವೆಂಬರ್ 16 ರಿಂದ ಆರಂಭಗೊಳ್ಳಲಿದ್ದು, 2022ರ ಫೆಬ್ರವರಿ 19ರ ತನಕ ನಡೆಯಲಿದೆ. 2021-22ನೇ ಸಾಲಿನ ದೇಶಿಯ ಕ್ರಿಕೆಟ್ ನಲ್ಲಿ ಒಟ್ಟು 2,127 ದೇಶೀಯ ಪಂದ್ಯಗಳು ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ರಣಜಿಯಲ್ಲಿ ಒಟ್ಟ 177 ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 21 ರಿಂದ ಮಹಿಳಾ ವಿಭಾಗದ ಏಕದಿನ ಲೀಗ್ ಪಂದ್ಯಗಳು ಆರಂಭಗೊಳ್ಳುವ ಮೂಲಕ ದೇಶೀಯ ಕ್ರಿಕೆಟ್ ಋತುವಿಗೆ ಚಾಲನೆ ಸಿಗಲಿದೆ. ಆ ನಂತರ ಅಕ್ಟೋಬರ್ 27ರಿಂದ ಮಹಿಳಾ ಏಕದಿನ ಚಾಲೆಂಜರ್ ಟ್ರೋಫಿ ಆರಂಭಗೊಳ್ಳಲಿದೆ.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಅಕ್ಟೋಬರ್ 21 ರಿಂದ ಆರಂಭಗೊಂಡು ನವೆಂಬರ್ 12 ರಂದು ಫೈನಲ್ ಪಂದ್ಯ ನಡೆಯಲಿದೆ. ಕೋವಿಡ್-10ರ ಕಾರಣ ಕಳೆದ ಸಲ ಸ್ಥಗಿತಗೊಂಡಿದ್ದ ದೇಶದ ಪ್ರತಿಷ್ಠಿತ ರಣಜಿ ಪಂದ್ಯಗಳು ಈ ಬಾರಿ ಮೂರು ತಿಂಗಳ ಕಾಲ ನಡೆಯಲಿದೆ. ವಿಜಯ್ ಹಜಾರೆ ಪ್ರೋಫಿಯು 2022ರ ಫೆಬ್ರವರಿ 23 ರಿಂದ ಮಾರ್ಚ್ 26ರ ವರೆಗೆ ನಡೆಯಲಿದೆ. ಪುರುಷರು ಮತ್ತು ಮಹಿಳಾ ವಿಭಾಗ ಸೇರಿ ಒಟ್ಟು 2127 ಪಂದ್ಯಗಳು ನಡೆಯಲಿವೆ.

Spread the love

Related Articles

Leave a Reply

Your email address will not be published. Required fields are marked *

Back to top button