ಗಣಿ ಸಚಿವ ಮುರುಗೇಶ್ ನಿರಾಣಿ ಉಸ್ತುವಾರಿ ಜಿಲ್ಲೆಯಲ್ಲಿ ಪ್ರಕೃತಿ ಸಂಪತ್ತು ಲೂಟಿ

ಕಲಬುರಗಿ: ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರ ಉಸ್ತುವಾರಿಯಲ್ಲಿರುವ ಕಲಬುರಗಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ದಂದೆ ಎಗ್ಗಿಲ್ಲದೆ ನಡೆಯುತ್ತಿದೆ. ಮರಳುಗಳ್ಳರು ರಾಜಾ ರೋಷವಾಗಿ ಲೂಟಿ ಹೊಡೆಯುತ್ತಿದ್ದರು, ಗಣಿಗಾರಿಕೆ, ಕಂದಾಯ, ಪೊಲೀಸ್ ಅಧಿಕಾರಿಗಳು ಸುಮ್ಮನಿದ್ದಾರೆ.
ಬಿಸಿಲೂರು ಕಲಬುರಗಿ ಜಿಲ್ಲೆಯಲ್ಲಿ ಹರಿಯುವ ಭೀಮಾ ನದಿಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಅಧಿಕಾರಿಗಳು ಕೋವಿಡ್ ನಿಯಂತ್ರಣದಲ್ಲಿ ಬ್ಯೂಸಿ ಆಗಿದ್ರೆ, ಇತ್ತ ಮರಳುಗಳ್ಳರು ಮರಳು ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ. ರಾತ್ರಿ ಆಗುತ್ತಿದ್ದಂತೆ ಭೀಮಾ ನದಿಗೆ ಇಳಿಯುವ ಜೆಸಿಬಿಗಳು ಭೀಮೆಯ ಒಡಲನ್ನ ಬಗೆದು ಬರಿದು ಮಾಡುತ್ತಿದ್ದಾರೆ. ಜಿಲ್ಲೆಯ ಅಫಜಲಪುರ, ಜೇವರ್ಗಿ ಹಾಗೂ ಚಿತ್ತಾಪುರ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಜೋರಾಗಿದೆ. ಯಾರ ಭಯವಿಲ್ಲದೆ ರಾಜಾ ರೋಷವಾಗಿ ದಂಧೆಕೋರರು ಟಿಪ್ಪರ್, ಟ್ರಾಕ್ಟರ್ ಗಳನ್ನ ನದಿಗೆ ಇಳಿಸಿ ಮರಳು ಸಾಗಾಟ ಮಾಡುತ್ತಿದ್ದಾರೆ.
ಮರಳುಗಳ್ಳರ ದಂಧೆಗೆ ಭೀಮಾ ನದಿ ಪಾತ್ರದ ಜನರು ಅಕ್ಷರಶಃ ರೋಸಿ ಹೋಗಿದ್ದಾರೆ. ಮೀತಿ ಮೀರಿ ಮರಳು ತೆಗೆಯುತ್ತಿರೋದ್ರಿಂದ ಭೀಮೆಯ ಜಲ ವಿಷವಾಗುತ್ತಿದೆ. ಜಿಲ್ಲೆಯ ಮಣ್ಣೂರ್, ಹೊಳೆ ಬೋಸಗಾ, ಹೊಸೂರು, ಹೇರೂರ್, ಬಸಪಟ್ಟಣ ಸೇರಿದಂತೆ ಹತ್ತಾರು ಹಳ್ಳಿಗಳ ಸುತ್ತ ಮುತ್ತ ಭೀಮಾ ನದಿಯಲ್ಲಿ ಮರಳುಗಾರಿಗೆ ನಡೆಯುತ್ತಲೆ ಇದೆ. ಇದೀಗ ಮಳೆಗಾಲ ಆರಂಭವಾಗಿದ್ದು ನದಿಗೆ ನೀರು ಬರುವ ಸಾಧ್ಯತೆ ಇದೆ. ಹೀಗಾಗಿ ನದಿಯಿಂದ ಮರಳು ತೆಗೆದು ನದಿ ಪಕ್ಕದಲ್ಲಿ ಸ್ಟಾಕ್ ಮಾಡಲಾಗುತ್ತಿದೆ.
ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಕಲಬುರಗಿ ಜಿಲ್ಲೆ ಉಸ್ತುವಾರಿಯಾಗಿದ್ದರೂ ಅಕ್ರಮ ಮರಳು ದಂಧೆಗೆ ಕಡಿವಾಣ ಬಿಳುತ್ತಿಲ್ಲ. ಸಚಿವರಿಗೆ ಅಕ್ರಮ ಮರಳು ಮಾಫಿಯಾಗೆ ಬಗ್ಗೆ ಗೊತ್ತಿಲ್ಲಾ ಅಂತೆನಿಲ್ಲ, ಗೊತ್ತಿದ್ರು ಯಾವುದೇ ಕ್ರಮ ಆಗುತ್ತಿಲ್ಲ. ಅಕ್ರಮ ಮರಳು ಮಾಫಿಯಾದವರ ಜೊತೆ ಸ್ಥಳೀಯ ರಾಜಕಾರಣಿಗಳು, ಅಧಿಕಾರಿಗಳು ಶಾಮಿಲಾಗಿದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕರು ಮಾಡ್ತಿದ್ದಾರೆ.
ಪ್ರಕೃತಿ ಸಂಪತ್ತು ಮರಳು ಲೂಟಿ ಮಾಡುತ್ತ ಲೂಟಿಕೋರರು, ಶಾಮಿಲಾದ ಅಧಿಕಾರಿಗಳು ಸಾಕಷ್ಟು ದುಡ್ಡು ಮಾಡುತ್ತ ಒಂದಡೆ ಸರ್ಕಾರ ಬೊಕ್ಕಸಕ್ಕೆ ಇನ್ನೊಂದಡೆ ಗ್ರಾಮಸ್ಥರಿಗೆ ಮತ್ತೊಂದಡೆ ಪ್ರಕೃತಿ ಸಂಪತ್ತಿಗೆ ಹಾನಿ ಮಾಡುತ್ತಿದ್ದಾರೆ. ಸಚಿವ ನಿರಾಣಿಯವರು ಇದಕ್ಕೆ ಕಡಿವಾಣ ಹಾಕಬೇಕು ಅಂತಾ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.
