ಉತ್ತರ ಕನ್ನಡಜಿಲ್ಲಾ ಸುದ್ದಿ

ಮನೆ ಕಳವು ಆರೋಪಿ ಬಂಧನ; ಚಿನ್ನದ ನೆಕ್ಲೇಸ್ ಜಪ್ತಿ

ಕಾರವಾರ : ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೇರೂರು ಮೂಲದ ಸಚಿನ್ ವಿರುಪಾಕ್ಷಪ್ಪ ರಾಮಾಪುರ ಬಂಧಿತ ಆರೋಪಿ.

ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ತೊಪ್ಪಲಕೇರಿಯ ಕೃಷ್ಣ ಜಟ್ಟಿ ಪಟಗಾರ ಎಂಬುವವರ ಮನೆಯನ್ನು ಮೇ ಎರಡರಂದು ಕಳ್ಳತನ ಮಾಡಲಾಗಿತ್ತು.ಚಿನ್ನದ ನೆಕ್ಲೇಸ್ ಹಾಗೂ 10 ಸಾವಿರ ರೂಪಾಯಿ ಕಳ್ಳತನವಾಗಿತ್ತು.ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ಸಿಪಿಐ ಶ್ರೀಧರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು.ಬಂಧಿತನಿಂದ 18 ಗ್ರಾಂ.ತೂಕದ 82 ಸಾವಿರ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೇಸ್ ಜಪ್ತಿ ಮಾಡಲಾಗಿದೆ.

ಹೊನ್ನಾವರ ಠಾಣೆಯ ಪಿ.ಎಸ್.ಐ. ಸಾವಿತ್ರಿ ನಾಯಕ, ಶಶಿಕುಮಾರ , ಮಹಾಂತೇಶ ನಾಯಕ, ಪಿ.ಎಸ್.ಐ. ಶಾಂತಿನಾಥ್ ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button