ಉತ್ತರ ಕನ್ನಡಜಿಲ್ಲಾ ಸುದ್ದಿ
ಬೈಕ್ಗೆ ಗುದ್ದಿದ ಟ್ಯಾಂಕರ್; ಸವಾರ ಸ್ಥಳದಲ್ಲೇ ಸಾವು

ಕಾರವಾರ: ಕುಮಟಾ ತಾಲೂಕಿನ ಮಿರ್ಜಾನ್ ಸಮೀಪ ಅತಿ ವೇಗದಿಂದ ಬಂದ ಟ್ಯಾಂಕರವೊಂದು ಬೈಕ್ ಸವಾರನಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಂಭವಿಸಿದೆ.ಮೃತ ವ್ಯಕ್ತಿಯನ್ನು ಕಿಮಾನಿ ಗ್ರಾಮದ ರಮೇಶ ಹರಿಕಂತ್ರ ಎಂದು ಗುರುತಿಸಲಾಗಿದೆ.
ಅತಿ ವೇಗದಿಂದ ಬಂದ ಲಾರಿ ಬೈಕ್ ಸವಾರನಿಗೆ ಗುದ್ದಿದ್ದು,ಬೈಕ್ ಲಾರಿಯಲ್ಲಿ ಸಿಲುಕಿ ಆರು ಕಿ.ಮೀ. ಕ್ರಮಿಸಿದೆ.ತಂಡ್ರಕುಳಿ ಸಮೀಪ ಬೈಕ್ ರಸ್ತೆಯ ಮಧ್ಯೆ
ಬಿದ್ದಿದೆ.ಗುದ್ದಿದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕುಮಟಾ ಪೊಲೀಸರು ಟ್ಯಾಂಕರನ್ನು ಅಂತ್ರವಳ್ಳಿ ಸಮೀಪ ತಡೆ ಹಿಡಿದಿದ್ದು, ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ. ಲಾರಿ ತಮಿಳುನಾಡು ಮೂಲದ್ದಾಗಿದೆ.




