ಉತ್ತರ ಕನ್ನಡ

ಸಹಜ ಹೆರಿಗೆ ಮೂಲಕ 4.8 ಕೆ.ಜಿ ತೂಕದ ಮಗು ಜನನ

ಕಾರವಾರ : ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮೂಲಕ 4.8 ಕೇಜಿ ತೂಕವಿರುವ ಮಗುವಿನ ಜನನ ವಾಗಿದೆ.

ಯಲ್ಲಾಪುರ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞ ಡಾ.ದೀಪಕ ಭಟ್‌ ಅವರು ಮಹಿಳೆಯೊಬ್ಬರ ಹೊಟ್ಟೆಯಲ್ಲಿನ ಮಗು 4.8 ಕೇಜಿ ತೂಕವಿದ್ದರೂ ಸಹ ಸಹಜ ಹೆರಿಗೆ ಮಾಡಿಸಿರುವುದು ವಿಶೇಷವಾಗಿದೆ.

ತಾಲೂಕಾ ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಧಾರವಾಡದ ಪ್ರೀತಿ ಪ್ರಭು ಎಂಬ ಮಹಿಳೆ ಯಾವುದೇ ಸಮಸ್ಯೆಯಾಗದೇ ಸಹಜ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಸಿಸೇರಿಯನ್ ಹೆರಿಗೆ ಆಗಲಿದೆ ಎಂದಿದ್ದರು. ಅದಕ್ಕಾಗಿ ಇವರ ಕುಟುಂಬದವರು ಯಲ್ಲಾಪುರದ ಆಸ್ಪತ್ರೆಗೆ ಕರೆತಂದು ಹೆರಿಗೆ ಮಾಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರಲ್ಲಿ ಮಗು ಎಷ್ಟೇ ಕಡಿಮೆ ತೂಕವಿದ್ದರೂ ಸಹಜ ಹೆರಿಗೆ ಎಂಬುದು ಅಪರೂಪವೆಂಬಂತಾಗಿ ಸಿಸೇರಿಯನ್‌ ಹೆರಿಗೆ
ಸಾಮಾನ್ಯವೆಂಬಂತಾಗಿರುವ ದಿನಗಳಲ್ಲಿ ಯಲ್ಲಾಪುರ ಆಸ್ಪತ್ರೆಯ ತಜ್ಞವೈದ್ಯರಾದ ಡಾ.ದೀಪಕ ಭಟ್‌ ಅವರು ನೂರಾರು ಮಹಿಳೆಯರಿಗೆ ಸಹಜ ಹೆರಿಗೆ
ಮಾಡಿಸುವುದರ ಮೂಲಕ ತಾಯಿ ಮಗುವಿನ ಜೀವ ಉಳಿಸಿ ಗಮನ ಸೆಳೆದಿದ್ದಾರೆ.

ಸಹಜ ಹೆರಿಗೆ ಆಗುವಲ್ಲಿ ನರ್ಸಗಳಾದ ಲತಾ ಶೆಟ್ಟಿ, ಸೀಮಾ, ಇಂದಿರಾ ಹಾಗೂ ಮೇರಿ ಸಹಕರಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button