ಹುಬ್ಬಳ್ಳಿ - ಧಾರವಾಡ

ಧಾರವಾಡ ಜಿ. ಪಂ. 27 ಕ್ಷೇತ್ರಕ್ಕೆ ಮೀಸಲಾತಿ ಪ್ರಕಟ

ಧಾರವಾಡ: ಈಗಾಗಲೇ ಧಾರವಾಡ ಜಿಲ್ಲಾ ಪಂಚಾಯತಿ ಚುನಾವಣೆಗೆ, ರಾಜ್ಯ ಚುನಾವಣೆ ಆಯೋಗವು ಈ ಹಿಂದೆನೇ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು, ಆದರೆ ಕೊರೊನಾ ಮಾಹಾಮಾರಿ ವೈರಸ್ ಎರಡನೇ ಅಲೆಯಿಂದಾಗಿ ಹಾಗೂ ಲಾಕ್ ಡೌನ್ ಪ್ರಕ್ರಿಯೆಯಿಂದಾಗಿ ಕೊಂಚ ಮುಂದಕ್ಕೆ ಹೋಗಿತ್ತು, ಆದರೆ ಈಗ ವೈರಸ್ ಕಂಟ್ರೊಲ್‌ಗೆ ಬಂದಿದ್ದು, ರಾಜ್ಯ ಸರ್ಕಾರ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸಿ ಬಹುತೇಕ, ಸಡಿಲಿಕೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಈಗ ರಾಜ್ಯ ಚುನಾವಣೆ ಆಯೋಗವು ಜಿಲ್ಲೆ ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಕ್ಷೇತ್ರವಾರು ಮೀಸಲಾತಿಯನ್ನು ಪ್ರಕಟಿಸಿ ಆದೇಶ ಹೋರಡಿಸಿದೆ.

ಜಿಲ್ಲಾ ಪಂಚಾಯತಿ ಒಟ್ಟು 27 ಕ್ಷೇತ್ರಗಳು ಕಂಪ್ಲೀಟ್ ವಿವರ

ಗರಗ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಸಾಮಾನ್ಯ ಸ್ಥಾನ, ನರೇಂದ್ರಕ್ಕೆ ಹಿಂದುಳಿದ ಅ ವರ್ಗ (ಮಹಿಳೆ), ಉಪ್ಪಿನ ಬೆಟಗೇರಿಗೆ ಸಾಮಾನ್ಯ (ಮಹಿಳೆ), ಅಮ್ಮಿನಭಾವಿಗೆ ಹಿಂದುಳಿದ ವರ್ಗ ‘ಅ’, ಹೆಬ್ಬಳ್ಳಿಗೆ ಸಾಮಾನ್ಯ (ಮಹಿಳೆ), ಮುಗದಕ್ಕೆ ಹಿಂದುಳಿದ ವರ್ಗ ‘ಅ’, ಮನಗುಂಡಿಗೆ ಸಾಮಾನ್ಯ (ಮಹಿಳೆ), ಬ್ಯಾಹಟ್ಟಿಗೆ ಹಿಂದುಳಿದ ವರ್ಗ ‘ಬ’ (ಮಹಿಳೆ), ಕೋಳಿವಾಡಕ್ಕೆ ಸಾಮಾನ್ಯ, ಅದರಗುಂಚಿಗೆ ಹಿಂದುಳಿದ ವರ್ಗ ಅ (ಮಹಿಳೆ), ಛಬ್ಬಿಗೆ ಅನುಸೂಚಿತ ಜಾತಿ, ಅಂಚಟಗೇರಿಗೆ ಅನುಸೂಚಿತ ಪಂಗಡ (ಮಹಿಳೆ), ಮೊರಬಕ್ಕೆ ಸಾಮಾನ್ಯ, ತಿರ್ಲಾಪುರಕ್ಕೆ ಅನುಸೂಚಿತ ಜಾತಿ (ಮಹಿಳೆ), ಅಳಗವಾಡಿಗೆ ಹಿಂದುಳಿದ ವರ್ಗ ಅ (ಮಹಿಳೆ), ಗಳಗಿಗೆ ಸಾಮಾನ್ಯ (ಮಹಿಳೆ), ಮಿಶ್ರಿಕೋಟೆಗೆ ಹಿಂದುಳಿದ ವರ್ಗ ಅ, ದೇವಿಕೊಪ್ಪಕ್ಕೆ ಹಿಂದುಳಿದ ವರ್ಗ ಬ, ತಬಕದಹೊನ್ನಳ್ಳಿಗೆ ಅನುಸೂಚಿತ ಪಂಗಡ, ಯರಗುಪ್ಪಿಗೆ ಹಿಂದುಳಿದ ವರ್ಗ ಅ (ಮಹಿಳೆ), ಸಂಶಿಗೆ ಸಾಮಾನ್ಯ (ಮಹಿಳೆ), ಗುಡಗೇರಿಗೆ ಸಾಮಾನ್ಯ, ಕಮಡೊಳ್ಳಿಗೆ ಸಾಮಾನ್ಯ (ಮಹಿಳೆ), ಯಲಿವಾಳಕ್ಕೆ ಸಾಮಾನ್ಯ (ಮಹಿಳೆ), ಹೊನ್ನಾಪುರಕ್ಕೆ ಸಾಮಾನ್ಯ, ಶಲವಡಿಗೆ ಸಾಮಾನ್ಯ, ನಲವಡಿಗೆ ಸಾಮಾನ್ಯ ಮೀಸಲಾತಿ ಪ್ರಕಟ ಮಾಡಲಾಗಿದೆ

Spread the love

Related Articles

Leave a Reply

Your email address will not be published. Required fields are marked *

Back to top button