ಉತ್ತರ ಕನ್ನಡಜಿಲ್ಲಾ ಸುದ್ದಿರಾಜಕೀಯ

ಕಷ್ಟಕಾಲದಲ್ಲಿ ಅನಂತ್​ ಕುಮಾರ್ ಹೆಗಡೆ ಎಲ್ಲಿ?: ಹುಡುಕಿಕೊಡುವಂತೆ ತಹಶೀಲ್ದಾರ್‌ಗೆ ಪತ್ರ

ಕಾರವಾರ: ಕೊರೊನಾ ಸಂದರ್ಭದಲ್ಲಿ ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಯ ಚೆನ್ನಮ್ಮನ ಕಿತ್ತೂರಿನ ಜನರ ಕಷ್ಟಗಳಿಗೆ ಧ್ವನಿಯಾಗಬೇಕಿದ್ದ ಸಂಸದ ಹೆಗಡೆ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಘೋಷಣೆ ಮಾಡಲಾಗುವುದು ಎಂದು ಬರೆದಿರುವ ಭಿತ್ತಿಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೆಲ ವರ್ಷಗಳಿಂದ ಕಾಣೆಯಾಗಿರುವ ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನು ಹುಡುಕಿಕೊಡುವಂತೆ ತಹಶೀಲ್ದಾರ್​ ಅವರಿಗೆ ಕಿತ್ತೂರು ಕ್ಷೇತ್ರದ ಜನರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ತಹಶೀಲ್ದಾರ್‌ಗೆ ಪತ್ರ ಬರೆದಿರುವ ಕಿತ್ತೂರಿನ ಜನರು, ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ ಮರಣ ಮೃದಂಗ ಬಾರಿಸುತ್ತಿದೆ‌. ಕ್ಷೇತ್ರದ ಜನರು ಸಾವು,ನೋವುಗಳ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಾಗಿದ್ದ ಸಂಸದರು ಕೆಲ ವರ್ಷಗಳಿಂದ ಕಾಣೆಯಾಗಿದ್ದಾರೆ. ಹೀಗಾಗಿ ಅವರನ್ನು ಹುಡುಕಿ ಕೊಡುವಂತೆ ಪತ್ರ ಬರೆದಿದ್ದಾರೆ. ಸಂಸದರನ್ನು ಹುಡುಕಿಕೊಟ್ಟವರಿಗೆ ಸೂಕ್ತವಾದ ಬಹುಮಾನ ಘೋಷಣೆ ಮಾಡಲಾಗುವುದು ಎಂದು ಭಿತ್ತಿಪತ್ರದಲ್ಲಿ ಹೇಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button