ಯುಕ್ರೇನ್ ಯುದ್ದದ ಸಮಯದಲ್ಲೇ ಭಯಾನಕ ಹೆಲೆಕಾಪ್ಟರ್ ಹೊರತೆಗೆದ ರಷ್ಯಾ!

ಯುಕ್ರೇನ್ ಹಾಗೂ ರಷ್ಯಾ ನಡುವಿನ ರಕ್ತಸಿಕ್ತ ಸಂಘರ್ಷ ತೀವ್ರಗೊಂಡಿದೆ. ಯುಕ್ರೇನ್‌ನ ಪೂರ್ವ ಭಾಗದಲ್ಲಿ ಎರಡೂ ಸೈನ್ಯದ ಕಾದಾಟ ದೊಡ್ಡ ಮಟ್ಟದಲ್ಲಿ ನಡೀತಿದೆ. ಇದರ ನಡುವೆಯೇ ಯುಕ್ರೇನ್ ವಿರುದ್ದ ಹಳೇ ಅಸ್ತ್ರಗಳನ್ನ ಬಳಸ್ತಿರೋ ರಷ್ಯಾ, ಇದೀಗ ಅತ್ಯಾಧುನಿಕ ಆಯುಧಗಳ ಕಡಗೆ ಮುಖ ಮಾಡಿದೆ.
ಇದರ ಭಾಗವಾಗಿ ರಷ್ಯಾ ತನ್ನ ಶಕ್ತಿಶಾಲಿ ಯುದ್ದ ಹೆಲಿಕಾಪ್ಟರ್‌ಗಳನ್ನ ಆಚೆ ತೆಗೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದನ್ನ ಕೂಡ ರಷ್ಯಾದ ರಕ್ಷಣಾ ಇಲಾಖೆ ರಿಲೀಸ್ ಮಾಡಿದೆ. ಈ Ka-52 ಮತ್ತು Mi-24 ಹೆಸರಿನ ಚಾಪರ್‌ಗಳು ನಿಖರವಾಗಿ ಕಾರ್ಯಾಚರಣೆ ಮಾಡ್ತವೆ ಅಂತ ರಷ್ಯಾ ಹೇಳಿದೆ. ಆದ್ರೆ ಇದನ್ನ ಯುಕ್ರೇನ್ ವಿರುದ್ದವೇ ಬಳಕೆ ಮಾಡ್ತೀವಿ ಅಂತ ನೇರವಾಗೇನೂ ಹೇಳಿಲ್ಲ. ಇತ್ತ ರಷ್ಯಾ, ನಮ್ಮ ವಿಧ್ಯುತ್ ಸ್ಥಾವರಗಳ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಪರಿಣಾಮ ನಮ್ಮ ಒಂದು ಕೋಟಿ ಜನರು ಕತ್ತಲೆಯಲ್ಲಿದ್ದಾರೆ ಅಂತ ಯುಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಇದಕ್ಕೆ ವಿಶ್ವಸಂಸ್ಥೆ ಕೂಡ ದನಿಗೂಡಿಸಿದ್ದು ಇದು ತೀವ್ರ ತೊಂದರೆ ತರ್ತಾಯಿದೆ..ಮಾನವೀಯ ಬಿಕ್ಕಟ್ಟು ಉಂಟಾಗುವ ಉಪಾಯ ಇದೆ ಅಂತ ಹೇಳಿದೆ.
