ಹುಬ್ಬಳ್ಳಿ - ಧಾರವಾಡ

ಹಬ್ಬಳ್ಳಿಯಲ್ಲಿ ನಗರಾಭಿವೃದ್ಧಿ ಸಚಿವರಿಂದ ಸಿಟಿ ರೌಂಡ್ಸ್; ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆಗಾಗಿ, ಇಂದು ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿಯವರು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಚಿವರು ಸಿಟಿ ರೌಡ್ಸ್ ಮೂಲಕ ಕಾಮಗಾರಿ ಪರಿಶೀಲನೆಗೆ ಅಧಿಕಾರಿಗಳ ಜೊತೆಗೆ ಮುಂದಾಗಿದ್ದಾರೆ.

ತೋಳಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಭೇಟಿಯ ವೇಳೆಯು ಸಚಿವರು ನಿಧಾನಗತಿ ಕಾಮಗಾರಿಗೆ ಬೇಸರ ವ್ಯಕ್ತಪಡಿಸಿದರು. ಬಳಿಕ ಅಧಿಕಾರಿಗಳಿಗೆ ಕೆರೆ ದಂಡೆ ಸುತ್ತ ಬೆಳೆದ ಕಳೆ ತೆಗೆಯಲು ಸೂಚಿಸಿದರು. ನಂತರ ವಾಯುವಿಹಾರಕ್ಕೆ ಬಂದವರ ಜೊತೆ ಚರ್ಚಿಸಿದರು.

ಕೆರೆ ಪಕ್ಕದ ರೇಣುಕಾನಗರದ ಮುಖ್ಯರಸ್ತೆಗೆ ಹೊಂದಿಕೊಂಡಿರುವ, ಮಾನಸಗಿರಿ ಕಾಲೊನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅರ್ದಮರ್ದ ಕಾಮಗಾರಿ ಗಮನಿಸಿದ ಸಚಿವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸಂಜೆಯೊಳಗೆ ತಾತ್ಕಾಲಿಕವಾಗಿ ರಸ್ತೆ ಸರಿಪಡಿಸಿ, ಅದರ ಫೋಟೊ ಕಳುಹಿಸಬೇಕು ಎಂದು ಎಂಜಿನಿಯರ್’ಗೆ ತಾಕೀತು ಮಾಡಿದರು.

ಇನ್ನೂ ಈ ವೇಳೆ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಅಧಿಕಾರಿ ವರ್ಗ ಸೇರಿದಂತೆ, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಅನೇಕರು ಉಪಸ್ಥತಿರಿದ್ದರು.

Related Articles

Leave a Reply

Your email address will not be published. Required fields are marked *

Back to top button