ಸಮುದಾಯಗಳಿಗಾಗಿ ಮೀಸಲಾತಿ ಕೂಗು

ಮಂಡ್ಯ: ರಾಜ್ಯದಲ್ಲಿ ಆಯಾ ಸಮುದಾಯಗಳಿಗಾಗಿ ಮೀಸಲಾತಿ ಎಂಬ ಕೂಗು ತೀವ್ರಗೊಂಡಿದೆ.
ಇದೀಗ ಮೀಸಲಾತಿ ವಿಚಾರಕ್ಕೆ ಒಕ್ಕಲಿಗರ ಸರದಿ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಒಕ್ಕಲಿಗ ಸಮುದಾಯ ಪ್ರತಿಭಟನೆಯಲ್ಲಿ ನಿರತವಾಗಿದೆ. ಕೆಂಪೇಗೌಡ ಒಕ್ಕಲಿಗರ ಸಂಘದಿಂದ ಈ ಪ್ರತಿಭಟನೆ ನಡೆಯುತ್ತಿದೆ.
ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಮೀಸಲಾತಿ ನೀಡುವಂತೆ ಹೋರಾಟ ಆರಂಭವಾಗಿದೆ. ಒಕ್ಕಲಿಗ ಜನಾಂಗಕ್ಕೆ 4 % ನಿಂದ 12 %ಗೆ ಮೀಸಲಾತಿ ಹೆಚ್ಚಿಸಲು ಆಗ್ರಹ ಕೇಳಿಬಂದಿದೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಿಂದ ಒಕ್ಕಲಿಗರ ಹೋರಾಟ ಆರಂಭವಾಗಿದ್ದು, ಮೀಸಲಾತಿ ನೀಡುವಂತೆ ಮದ್ದೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಸಹ ಪಕ್ಷತೀತವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಒಕ್ಕಲಿಗರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಮದ್ದೂರು ಪ್ರವಾಸಿ ಮಂದಿರದಿಂದ ನರಸಿಂಹಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆ ಆರಂಭವಾಗಿದೆ. ಮೆರವಣಿಗೆ ನಂತರ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಸಭೆಯ ನೇತೃತ್ವವನ್ನು ಶ್ರೀ ನಂಜಾವಧೂತ ಸ್ವಾಮೀಜಿ ವಹಿಸಲಿದ್ದಾರೆ. ಸಭೆಯಲ್ಲಿ ಜೆಡಿಎಸ್ ಶಾಸಕರು, ಕಾಂಗ್ರೆಸ್ ಮಾಜಿ ಶಾಸಕರು ಹಾಗೂ ಮುಖಂಡರು ಭಾಗಿಯಾಗಿದ್ದಾರೆ.
