ಆರೋಗ್ಯಲೈಫ್ ಸ್ಟೈಲ್

ಬೆಲ್ಲದ ದೋಸೆ

ಬೇಕಾಗುವ ಸಾಮಾಗ್ರಿಗಳು

ಅಕ್ಕಿ ಹಿಟ್ಟು- 1 ಬಟ್ಟಲು

ಗೋಧಿ ಹಿಟ್ಟು- 2 ಬಟ್ಟಲು

ಬೆಲ್ಲದ ಪುಡಿ- 1.5 ಬಟ್ಟಲು

ತೆಂಗಿನ ತುರಿ – ಅರ್ಧ ಬಟ್ಟಲು

ಏಲಕ್ಕಿ ಪುಡಿ- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಅಡುಗೆ ಸೋಡ- ಸ್ಪಲ್ಪ

ತುಪ್ಪ- ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ: ಮೊದಲಿಗೆ ಪಾತ್ರೆಯೊಂದಕ್ಕೆ ಬೆಲ್ಲವನ್ನು ಹಾಕಿ, ಕಾಯಿಸಿ ಸೋಸಿಕೊಳ್ಳಬೇಕು. ನಂತರ ಮತ್ತೊಂದು ಪಾತ್ರೆಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಬೆಲ್ಲದ ನೀರು, ಏಲಕ್ಕಿ ಪುಡಿ, ಚಿಟಿಕೆಯಷ್ಟು ಉಪ್ಪು, ಅಡುಗೆ ಸೋಡ ಎಲ್ಲವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ತವಾವನ್ನು ಬಿಸಿ ಮಾಡಿಕೊಂಡು ಹಿಟ್ಟನ್ನು ತವಕ್ಕೆ ತೆಳುವಾಗಿ ಹರಡಿ. ದೋಸೆ ಮೇಲೆ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ದೋಸೆ ಕೆಂಬಣ್ಣ ಬರುವವರೆಗೆ ಬೇಯಿಸಿದರೆ, ರುಚಿಕರವಾದ ಬೆಲ್ಲದ ದೋಸೆ ಸವಿಯಲು ಸಿದ್ಧ.

Related Articles

Leave a Reply

Your email address will not be published. Required fields are marked *

Back to top button