ಎಲ್ಲೆಲ್ಲೂ ರಾಕಿಂಗ್ ಸ್ಟಾರ್ ಹವಾ: ಭರ್ಜರಿ ಓಪನಿಂಗ್ ಪಡೆದುಕೊಂಡ ಕೆಜಿಎಫ್ 2

ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಇಂದು ವಿಶ್ವಾದ್ಯಂತ ತೆರೆ ಕಂಡಿದೆ. ಭಾರತದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ಕೆಜಿಎಫ್-2 ಸಿನಿಮಾ ನೋಡಲು ಇಂದು ಚಿತ್ರಮಂದಿರಗಳತ್ತ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ.
ಟ್ರೇಲರ್ ಹಾಗೂ ಹಾಡಗುಳ ಮೂಲಕವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಕೆಜಿಎಫ್ ಅಬ್ಬರ ಮದ್ಯರಾತ್ರಿಯಿಂದಲೇ ಆರಂಭವಾಗಿದೆ. ಪ್ರೇಕ್ಷಕರ ಗಮನ ಸೆಳೆದಿದ್ದ ಕೆಜಿಎಫ್-2 ಸಿನಿಮಾದ ಶೋಗಳು ಇಂದು ಮಧ್ಯರಾತ್ರಿಯಿಂದಲೇ ಆರಂಭವಾಗಿದ್ದು, ಚಿತ್ರಕ್ಕೆ ಸಿನಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಬೆಂಗಳೂರಿನ ಪ್ರಸನ್ನ ಥಿಯೇಟರ್ನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಆರಂಭವಾಗಿದ್ದು, ಇಂದು ಒಟ್ಟು ಆರು ಶೋಗಳು ನಡೆಯಲಿದೆ. ಜೊತೆಗೆ ಪ್ರಸನ್ನ ಥಿಯೇಟರ್ ಮುಂದೆ ಬೃಹತ್ ಕಟೌಟ್ಗಳನ್ನ ಹಾಕಲಾಗಿದೆ. ಕೆ.ಜಿ.ಎಫ್ ಚಾಪ್ಟರ್-2 ಸಿನಿಮಾಕ್ಕೆ ಪ್ರತಿಯೊಂದು ಕಡೆಯಲ್ಲೂ ಅದ್ದೂರಿ ಓಪನಿಂಗ್ ಸಿಕ್ಕಿದೆ. ರಾತ್ರಿಯೆಲ್ಲಾ ಕಾದು ಕುಳಿತು ಟಿಕೆಟ್ ಪಡೆದ ಅಭಿಮಾನಿಗಳು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಚಿತ್ರದ ಮೇಕಿಂಗ್ ಮ್ಯೂಸಿಕ್, ರಾಕಿಂಗ್ ಸ್ಟಾರ್ ಯಶ್ ಆ್ಯಕ್ಟಿಂಗ್ ಸಿನಿ ರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟಿರುವ ಅಭಿಮಾನಿಗಳು ಸಿನಿಮಾ ಸೂಪರ್ ಅಂತ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಕನ್ನಡ ಚಿತ್ರರಂಗದ ಮೈಲಿಗಲ್ಲು ಎಂದಿದ್ದಾರೆ.




