ಮನರಂಜನೆಸಿನಿಮಾಸ್ಯಾಂಡಲ್ ವುಡ್

ಕೆಜಿಎಫ್ 2 ಚಿತ್ರದ 3ನೇ ಹಾಡು ರಿಲೀಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಇನ್ನು ಗಂಟೆಗಳು ಮಾತ್ರವೇ ಬಾಕಿ ಉಳಿದಿದೆ. ಈಗಾಗ್ಲೆ ಚಿತ್ರದ ತೂಫಾನ್ ಹಾಗೂ ಗಗನ ನೀ ಹಾಡುಗಳು ಪ್ರೇಕ್ಷಕರ ಮನ ಗೆದಿದ್ದು ಇದೀಗ ಮೂರನೇ ಹಾಡು ಬಿಡಗುಡೆ ಆಗಿದೆ. ರವಿ ಬಸ್ರೂರ್ ಸಂಗೀತ ಸಂಯೋಜಿಸಿರೋ ಸುಲ್ತಾನ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು ಯಶ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ಕಥಾನಾಯಕನ ಗುಣಗಾನ ಮಾಡುವ ಸುಲ್ತಾನ ಹಾಡಿಗೆ ರವಿ ಬಸ್ರೂರ್ ಸಾಹಿತ್ಯ ಬರೆದಿದ್ದಾರೆ. ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ರವಿ ಬಸ್ರೂರ್, ಪುನೀತ್ ರುದ್ರನಾಗ್, ಮನೀಶ್ ದಿನಕರ್, ವರ್ಷಾ ಆಚಾರ್ಯ ಹಾಡಿಗೆ ಧ್ವನಿಯಾಗಿದ್ದಾರೆ. ಲಹರಿ ಮ್ಯೂಸಿಕ್ ಕನ್ನಡ, ಮಲಯಾಳಂ, ತೆಲುಗು ಹಾಗೂ ತಮಿಳು ವರ್ಷನ್ ಬಿಡುಗಡೆ ಮಾಡಿದ್ರೆ ಎಮ್ ಆರ್ ಟಿ ಮ್ಯೂಸಿಕ್ ಹಿಂದಿ ಹಾಡನ್ನ ರಿಲೀಸ್ ಮಾಡಿದೆ

Spread the love

Related Articles

Leave a Reply

Your email address will not be published. Required fields are marked *

Back to top button