Breaking NewsLatestಜಿಲ್ಲಾ ಸುದ್ದಿದಾವಣಗೆರೆರಾಜ್ಯಸುದ್ದಿ
ದಲಿತ ವಿದ್ಯಾರ್ಥಿನಿಗೆ ಸಿಕ್ತು ಸರ್ಕಾರಿ ಮೆಡಿಕಲ್ ಸೀಟ್: ಓದಿಗೆ 1 ಲಕ್ಷ ರೂ ನೀಡಿದ ಶಾಸಕ..!

ದಾವಣಗೆರೆ: ಜಗಳೂರು ತಾಲೂಕಿನ ಮೆದಗಿನಕೆರೆ ಗ್ರಾಮದ ದಲಿತ ಯುವತಿ ವಿದ್ಯಾಭ್ಯಾಸಕ್ಕೆ ಶಾಸಕ ಎಸ್. ವಿ. ರಾಮಚಂದ್ರಪ್ಪ ನೆರವಾಗಿದ್ದಾರೆ.
1 ಲಕ್ಷ ರೂಪಾಯಿ ನೀಡಿದ ಅವರು ಆಕೆ ಎಂಬಿಬಿಎಸ್ ಓದುವವರೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ದಲಿತ ಕುಟುಂಬದ ಹನುಮಂತಪ್ಪ ಹಾಗೂ ಪತ್ನಿ ನಾಗರತ್ನ ರವರ ಪುತ್ರಿ ಅಕ್ಷತಾಳಿಗೆ ಸರ್ಕಾರಿ ಎಂಬಿಬಿಎಸ್ ಮೆಡಿಕಲ್ ಸೀಟು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಜಗಳೂರು ಶಾಸಕರೂ ಆದ ಶ್ರೀ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿ ಅಧ್ಯಕ್ಷ ಎಸ್ ವಿ.ರಾಮಚಂದ್ರಪ್ಪ ರವರು ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಒಂದು ಲಕ್ಷ ರೂಪಾಯಿಗಳನ್ನ ನೀಡಿದರು.
ಈ ವೇಳೆ ಮಾತನಾಡಿದ ಅವರು, ದಲಿತ ಸಮುದಾಯದ ಯುವತಿ ಈ ರೀತಿಯಲ್ಲಿ ಓದಿ ಸರ್ಕಾರಿ ಮೆಡಿಕಲ್ ಸೀಟು ಪಡೆದಿರುವುದು ಖುಷಿಯ ವಿಚಾರ. ಈಗ ಒಂದು ಲಕ್ಷ ರೂಪಾಯಿ ವಿದ್ಯಾಭ್ಯಾಸಕ್ಕಾಗಿ ಸಹಾಯವಾಗಿ ನೀಡಿದ್ದೇನೆ. ಮತ್ತೆ ಏನಾದರು ಸಹಾಯ ಬೇಕಾದರೆ ಖಂಡಿತವಾಗಿಯೂ ಮಾಡುತ್ತೇನೆ ಎಂದು ಭರವಸೆ ನೀಡಿದರು.
