ವಿದೇಶಸುದ್ದಿ

ಇಷ್ಟವಿದ್ದರೆ ಇಮ್ರಾನ್​ ಭಾರತಕ್ಕೆ ಹೋಗಲಿ; ಮರ್ಯಾಮ್

ಇಸ್ಲಾಮಾಬಾದ್/ಲಾಹೋರ್: ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಮರ್ಯಮ್ ನವಾಜ್ ಅವರು ಮಾಜಿ ಪ್ರಧಾನಿ ಇಮ್ರಾನ್​ಖಾನ್ ಭಾರತವನ್ನು ಹೊಗಳಿದ್ದಕ್ಕಾಗಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಇಷ್ಟವಿದ್ದರೆ ನೆರೆಯ ದೇಶವಾದ ಭಾರತಕ್ಕೆ ಹೋಗಲಿ ಎಂದಿದ್ದಾರೆ.

ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿಯಾಗಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (PML-N) ಉಪಾಧ್ಯಕ್ಷ ಮರ್ಯಮ್ ಅವರು ಅವಿಶ್ವಾಸ ನಿರ್ಣಯವನ್ನು ಎದುರಿಸುವಾಗ ಭಾರತದ ಯಾವುದೇ ಪ್ರಧಾನಿ ಸಂವಿಧಾನದತ್ತವಾದ ಅವಿಶ್ವಾಸ ನಿರ್ಣಯವನ್ನು ಎದುರಿಸಿಲ್ಲ ಎಂದು ಭಾರತವನ್ನು ಉದಾಹರಿಸಿದ್ದನ್ನು ಹೇಳಿ ಇಮ್ರಾನ್​ಖಾನ್ ರನ್ನು ಟೀಕಿಸಿದ್ದಾರೆ.

ಭಾರತವು ಸೆನ್ಸ್ ಆಫ್ ಹ್ಯೂಮರ್ ಹೊಂದಿರುವ ಅದ್ಭುತ ರಾಷ್ಟ್ರ ಎಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಹೇಳಿದ್ದ ಇಮ್ರಾನ್ ಮಂದುವರೆದು “ಯಾವುದೇ ಮಹಾಶಕ್ತಿಯು ಭಾರತವನ್ನು ತನ್ನ ಹಿತಾಸಕ್ತಿಗೆ ವಿರುದ್ಧವಾಗಿ ಏನನ್ನೂ ಮಾಡಲು ಒತ್ತಾಯಿಸುವುದಿಲ್ಲ. ಭಾರತ ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಯಾಗಿ ಮರ್ಯಮ್ ಇಮ್ರಾನ್​ಖಾನ್ ವಿರುದ್ಧ ವಾಗ್ದಾಳಿ ನಡೆಸಿ ಅಷ್ಟು ಇಷ್ಟವಿದ್ದರೆ ಇಮ್ರಾನ್ ದೇಶ ಬಿಟ್ಟು ಭಾರತಕ್ಕೆ ಹೋಗಿರಲಿ ಎಂದು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button