IPL 2022Latestಕ್ರಿಕೆಟ್ಕ್ರೀಡೆ

ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಹ್ಯಾಟ್ರಿಕ್ ಗೆಲುವು

ಮುಂಬೈ: ಸರ್ವಾಂಗೀಣ ನಿರ್ವಹಣೆ ತೋರಿದ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್ ಜೈಂಟ್ಸ್ ತಂಡ ಐಪಿಎಲ್-15ರಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದೆ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ (80ರನ್, 52 ಎಸೆತ, 9 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಬೌಲರ್‌ಗಳಾದ ರವಿ ಬಿಷ್ಣೋಯಿ (22ಕ್ಕೆ 2) ಮಾರಕ ದಾಳಿ ನೆರವಿನಿಂದ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು.


ಅಂತಿಮ ಓವರ್‌ನಲ್ಲಿ ಲಕ್ನೋ ತಂಡಕ್ಕೆ ಗೆಲ್ಲಲು 5 ರನ್‌ಗಳ ಅಗತ್ಯವಿತ್ತು. ಠಾಕೂರ್ ಎಸೆದ ಈ ಓವರ್‌ನ ಮೊದಲ ಎಸೆತದಲ್ಲಿಯೇ ದೀಪಕ್ ಹೂಡಾ ವಿಕೆಟ್ ಕಳೆದುಕೊಂಡರು. ಈಗ 5 ಎಸೆತಗಳಲ್ಲಿ 5 ರನ್‌ಗಳಿಸುವ ಸವಾಲು ಲಕ್ನೋ ಮುಂದಿತ್ತು. ಆದರೆ ನಂತರ ಕಣಕ್ಕಿಳಿದ ಯುವ ಸೆನ್ಸೇಶನಲ್ ಆಟಗಾರ ಆಯುಷ್ ಬದೋನಿ ಮೂರು ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಇನ್ನೂ ಎರಡು ಎಸೆತ ಬಾಕಿಯಿರುವಂತೆಯೇ ಗೆಲುವನ್ನು ಸಾರಿದರು.

ಈ ಮೂಲಕ ಮತ್ತೊಮ್ಮೆ ಯುವ ಆಟಗಾರ ಬದೋನಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್‌ಗೆ 150 ರನ್‌ಗಳ ಸಾಧಾರಣ ಗುರಿ ನಿಗದಿಪಡಿಸಿತು. ಈ ಪಂದ್ಯದಲ್ಲಿ ಲಕ್ನೋ ತಂಡದ ಬೌಲರ್‌ಗಳು ಡಿಸಿ ದಾಂಡಿಗರ ವಿರುದ್ಧ ಅದ್ಭುತ ರೀತಿಯಲ್ಲಿ ಮೇಲುಗೈ ಸಾಧಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button