Breaking NewsLatestರಾಷ್ಟ್ರೀಯಸುದ್ದಿ

ಮುಂಬೈನಲ್ಲಿ ಪತ್ತೆಯಾಗಿರುವ ಎಕ್ಸ್ ಇ ತಳಿ ವರದಿ ಅಲ್ಲಗೆಳೆದ ಕೇಂದ್ರ ಸರ್ಕಾರ

ಕೊರೊನಾ ವೈರಸ್ ನ ಇತರೆ ತಳಿಗಳಿಗಿಂತ ವೇಗವಾಗಿ ಹರಡಬಲ್ಲ ಹೊಸ ಎಕ್ಸ್ ಇ ತಳಿಯ ಮೊದಲ ಪ್ರಕರಣ ಮುಂಬೈನಲ್ಲಿ ವರದಿಯಾಗಿರೋದಾಗಿ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಇದನ್ನ ಕೇಂದ್ರ ಸರ್ಕಾರ ಅಲ್ಲಗಳೆದಿದೆ.

ಹಿಂದಿ ಸಿನಿ ಇಂಡಸ್ಟ್ರಿಯಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ 50 ವರ್ಷದ ಮಹಿಳೆಯಲ್ಲಿ ಎಕ್ಸ್ ಇ ಸೋಂಕು ಪತ್ತೆಯಾಗಿರೋದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದೆ. ಸೋಂಕಿನಿಂದ ಗುಣಮುಖರಾಗಿರುವ ಮಹಿಳೆ ಫೆಬ್ರವರಿಯಲ್ಲಿ ದಕ್ಷಿಣಾ ಆಫ್ರಿಕಾದಿಂದ ವಾಪಸಾಗಿದ್ದಾಗಿ ಅಧಿಕಾರಿಗಳು ತಿಳಿಸಿದ್ದರು.

ಆದರೆ ಕೇಂದ್ರ ಸರ್ಕಾರದ ಅಧಿಕಾರಿಗಳು ಎಕ್ಸ್ ಇ ತಳಿ ಪತ್ತೆಯಾಗಿರುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದ್ದಾರೆ. ಭಾರತದ ಸಾರ್ಸ್ ಕೋವ್ 2 ಜೆನೆಟಿಕ್ಸ್ ಕಾನ್ಸೊರ್ಟಿಯಮ್ ನ ಜಿನೋಮ್ ಸೀಕ್ವೆನ್ಸಿಂಗ್ ತಜ್ಞರು ವಿವರವಾಗಿ ಪರಶೀಲನೆ ನಡೆಸಿದ್ದು, ಮಾದರಿಯಲ್ಲಿ ಪತ್ತೆಯಾಗಿರುವ ತಳಿಯ ಜಿನೋಮ್ ರಚನೆಗಳಿಗೂ ಎಕ್ಸ್ ಇ ತಳಿಯ ರಚನೆಗೂ ಯಾವುದೇ ಹೋಲಿಕೆ ಇಲ್ಲ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button