ಆಹಾರಲೈಫ್ ಸ್ಟೈಲ್
ಬೇಸಿಗೆಯಲ್ಲಿ ಮಾಡಿ ಕುಡಿಯಿರಿ ಖರ್ಜೂರದ ಪಾನಕ

ಬಿಸಿಲಿನ ಝಳದಿಂದ ಬಾಯಾರಿಕೆ, ಸುಸ್ತು ಸಾಮಾನ್ಯ. ಮನೆಯಿಂದ ಹೊರಗೆ ಒಂದು ರೌಂಡ್ ಹೋಗಿ ಬಂದರೆ ಸಾಕಪ್ಪ ಸಾಕು ಏನ್ ಬಿಸಿಲು ಅನಿಸುತ್ತೆ. ಮನೆಗೆ ಬಂದಾಗ ತಣ್ಣಗೆ ಒಂದು ಲೋಟ ಜ್ಯೂಸ್ ಕುಡಿಬೇಕು ಅನಿಸುತ್ತೆ. ಪ್ರಿಡ್ಜ್ ಬಾಗಿಲು ತೆಗೆದ್ರೆ ವಿಧ ವಿಧವಾದ ಜ್ಯೂಸ್ ಗಳಿರ್ತಾವೆ. ಆದ್ರೆ ಅವು ನಾಲಿಗೆಗೆ ರುಚಿಯೇ ಹೊರತು ಆರೋಗ್ಯಕ್ಕಲ್ಲ. ಹಾಗಾದ್ರೆ ಇವತ್ತು ನಾಲಿಗೆ ರುಚಿಯ ಜೊತೆಗೆ ಆರೋಗ್ಯಕ್ಕೂ ಮುದ ನೀಡುವ ಜ್ಯೂಸ್ ಒಂದನ್ನ ಪರಿಚಯಿಸ್ತೀವಿ ಮಾಡಿ ರುಚಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಬೀಜ ತೆಗೆದ ಖರ್ಜೂರ 1 ಕಪ್
ಹುಣಸೆಹಣ್ಣಿನ ರಸ 1 ಟೀ ಚಮಚ
ಉಪ್ಪು ಚಿಟಿಕೆ
ಸಿಹಿಗೆ ಬೇಕಾದಷ್ಟು ಬೆಲ್ಲ
ಕಾಳು ಮೆಣಸಿನ ಪುಡಿ ಸ್ವಲ್ಪ
ನೀರು ಅರ್ಧ ಲೀಟರ್
ತಯಾರಿಸುವ ವಿಧಾನ: ಖರ್ಜೂರವನ್ನು ಸಣ್ಣಗೆ ಕತ್ತರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣಕ್ಕೆ ಹುಣಸೆ ರಸ, ಬೆಲ್ಲ ಸೇರಿಸಿ ಬಳಿಕ ನೀರು ಹಾಕಿ. ಪುನಃ ರುಬ್ಬಿಕೊಳ್ಳಬೇಕು. ಪಾನಕ ಸೇವಿಸುವಾಗ ಕೊಂಚ ಕಾಳುಮೆಣಸು ಹಾಗೂ ಚಿಟಿಕೆ ಉಪ್ಪು ಹಾಕಿ ಕುಡಿಯಿರಿ.




