Breaking NewsLatestಕ್ರೈಂರಾಷ್ಟ್ರೀಯಸುದ್ದಿ

ಆತ್ಮಹತ್ಯೆಗೆ ಶರಣಾದ 13 ವರ್ಷದ ಬಾಲಕಿ: ಸಾವಿನ ಕುರಿತು ಬರೆದಿದ್ದಳು ಕವನ!

ನಾಗ್ಪುರ: ಆಕೆಗೆ ಜಸ್ಟ್ 13 ವರ್ಷ. ಓದಿನಲ್ಲಿ ತುಂಬ ಚೂಟಿಯಾಗಿದ್ದ ಹುಡುಗಿಗೆ ಕಥೆ ಕವನ ಬರೆಯುವ ಹವ್ಯಾಸವಿತ್ತು. ಆದ್ರೆ ನಿನ್ನೆ ಮಧ್ಯಹ್ನಾ ಆ ಬಾಲಕಿ ಸಾವಿನ ಕುರಿತು ಕವನಗಳು ಮತ್ತು ಉಲ್ಲೇಖಗಳನ್ನು ಬರೆದ ನಂತರ ಮಹಾರಾಷ್ಟ್ರದ ನಾಗ್ಪುರದ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಜ್ನಿ ಪ್ರದೇಶದ ಚಂದ್ರಮಣಿ ನಗರದ ನಿವಾಸಿ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯಾಗಿದ್ದಾಳೆ.

ಸೋಮವಾರ ಮಧ್ಯಾಹ್ನ 1 ಗಂಟೆಗೆ ಬಾಲಕಿಯ ತಾಯಿ ಬಾತ್‍ರೂಮ್‍ನಲ್ಲಿದ್ದಾಗ ಮತ್ತು ಆಕೆಯ ಸಹೋದರ ಡ್ರಾಯಿಂಗ್ ರೂಮ್‍ನಲ್ಲಿದ್ದಾಗ ಬಾಲಕಿ ಮಲಗುವ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ. ತಾಯಿ ಮಲಗುವ ಕೋಣೆಗೆ ಹೋದಾಗ ಮಗಳ ಮೃತದೇಹ ನೇತಾಡುತ್ತಿರುವುದು ಕಂಡುಬಂದಿದೆ.

ಬಾಲಕಿ ಕಳೆದ ಎರಡು ತಿಂಗಳಿನಿಂದ ಮರಾಠಿ ಮತ್ತು ಇಂಗ್ಲಿಷ್‍ನಲ್ಲಿ ಸಾವಿನ ಕುರಿತು ಕವನಗಳು ಬರೆಯುತ್ತಿದ್ದಳು. ಬಾಲಕಿ ಮಲಗುವ ಕೋಣೆಯಲ್ಲಿ ಪೊಲೀಸರು ನೋಟ್‍ಬುಕ್ ಅನ್ನು ಕಂಡು ಪರಿಶೀಲಿಸಿದ್ದಾರೆ. ಅದರಲ್ಲಿ ಕೊರೊನಾವೈರಸ್ ಹರಡಬೇಕು, ಅದರಿಂದ ನಾನು ಸಾಯಬೇಕು ಎಂದು ಬರೆದಿದ್ದಾಳೆ. ಬಾಲಕಿ ವಿದ್ಯಾಭ್ಯಾಸದಲ್ಲಿ ಉತ್ತಮಳಾಗಿದ್ದು, ಪ್ರತಿ ವರ್ಷ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ. ತಾಯಿಯೊಂದಿಗೆ ಕೊನೆಯ ಬಾರಿ ಮಾತನಾಡಿದಾಗ ಆಕೆಯ ನಡವಳಿಕೆ ಸಾಮಾನ್ಯವಾಗಿತ್ತು ಎಂದು ಹೇಳಲಾಗಿದೆ. ಅಜ್ನಿ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button