ಕೆಲಸಕ್ಕೆ ತಕ್ಕ ಗೌರವ
ಒಂದು ದಿನ ನೆಪೋಲಿಯನ್ ಚಕ್ರವರ್ತಿ ತನ್ನ ಹೆಂಡತಿಯ ಜೊತೆ ನಡೆದುಕೊಡು ಹೋಗುತ್ತಿದ್ದ. ಒಂದು ಸಣ್ಣ ರಸ್ತೆಯಲ್ಲಿ ಎದುರು ದಿಕ್ಕಿನಿಂದ ಒಬ್ಬ ಮರಗೆಲಸದವನು ತನ್ನ ತಲೆಯ ಮೇಲೆ ಮರದ ತಂಡುಗಳನ್ನು ಹೊತ್ತುಕೊಂಡು ಬರುತ್ತಿದ್ದ. ಅವನು ತೀರ ಹತ್ತಿರಕ್ಕೆ ಬಂದಾಗ ತಾನು ಪಕ್ಕಕ್ಕೆ ಜರುಗಿ ಹೆಂಡತಿಗೂ ಹೇಳಿದ. ಅವನಿಗೆ ಜಾಗ ಬಿಡು ಶೀಮಂತ ರಾಜಮನೆತನಕ್ಕೆ ಸೇರಿದ ಹೆಂಡತಿ ಕೇಳಿದಳು,
’ಆ ಸಾಮಾನ್ಯ ಕೆಲಸದವನು ನಮಗೆ ನಮಸ್ಕಾರ ಮಾಡಲಿಲ್ಲ ನಮಗೆ ಗೌರವ ತೋರಿಸಲಿಲ್ಲ ಆದರೂ ನೀವು ಮಾತ್ರ ಇಷ್ಟು ವಿನಯವಾಗಿ ವರ್ತಿಸುತ್ತಿದ್ದೀರಿ? ನೆಪೋಲಿಯನ್ ಉತ್ತರಿಸಿದ ನೀನು ಶ್ರೀಮಂತಿಕೆಗೆ ತೋರಿಸುವಷ್ಟು ಗೌರವ ಸಾಧಾರಣ ಕೆಲಸಕ್ಕೆ ತೋರಿಸುತ್ತಿಲ್ಲ. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಘನತೆ ಮರ್ಯಾದೆ ಇರುತ್ತದೆ.
ಯಾವ ಕೆಲಸವೂ ಸಣ್ಣದಲ್ಲ, ಯಾವ ಕೆಲಸವೂ ದೊಡ್ಡದಲ್ಲ. ನಮಗಾಗಿ ದುಡಿಯುವ ಕೆಲಸಗಾರರನ್ನು ಮರ್ಯಾದೆಯಿಂದ ಕಾಣುವುದು ನಮ್ಮ ದೊಡ್ಡತನವನ್ನು ತೋರಿಸುತ್ತದೆ ನೆನಪಿಟ್ಟುಕೋ ಎಂದು ಹೇಳಿದ. ನೆಪೋಲಿಯನ್ ಮಾತುಗಳನ್ನೇ ಗಾಂಧೀಜಿಯವರು ಎಷ್ಟೋ ಸಂದರ್ಭಗಳಲ್ಲಿ ಆಚರಣೆಗೆ ತಂದಿದ್ದರು.
ನೀತಿ; ಸಂಸ್ಕಾರವಂತನೇ ನಿಜವಾದ ಶ್ರೀಮಂತ




