Breaking NewsLatestಕಲಬುರ್ಗಿಜಿಲ್ಲಾ ಸುದ್ದಿ
ಸಾಲಿಗ್ರಾಮ ಫೂಟ್ ವೇರ್ : ಅಂಗಡಿ ಹೆಸರು ತೆಗೆಯುವಂತೆ ಒತ್ತಾಯ

ಕೋಟ: ಸಾಲಿಗ್ರಾಮದ ಮುಖ್ಯಪೇಟೆಯಲ್ಲಿ ಹಿಂದೂ ದೇವರುಗಳ ಹಾಗೂ ಪ್ರಸಿದ್ಧ ಕ್ಷೇತ್ರದ ಹೆಸರನಿಟ್ಟುಕೊಂಡು ವ್ಯವಹರಿಸುತ್ತಿದ್ದ ಸಾಲಿಗ್ರಾಮ ಫೂಟ್ ವೇರ್ ಹೆಸರು ಬದಲಾಯಿಸುವಂತೆ ಪಟ್ಟಣ ಪಂಚಾಯತ್ ಗೆ ಹಿಂದೂ ಜಾಗರಣಾ ವೇದಿಕೆ ಮನವಿ ನೀಡಿದೆ.
ಈ ವೇಳೆ ಮಾತನಾಡಿದ, ಹಿಂಜಾವೇ ಜಿಲ್ಲಾ ಮುಖಂಡ ಶಂಕರ್ ಕೋಟ, ಸಾಲಿಗ್ರಾಮ ಎನ್ನುವ ಕ್ಷೇತ್ರ ಪಾವಿತ್ರತೆ ಹೊಂದಿದ ಕ್ಷೇತ್ರವಾಗಿದೆ. ಇದರ ಹೆಸರನ್ನು ಇಟ್ಟುಕೊಂಡು ವ್ಯವಹರಿಸುವ ಜೊತೆಗೆ ಹಿಜಾಬ್ ಸಂಬಂಧಿಸಿದ ಕೋಟ್೯ ತೀರ್ಪು ಉಲ್ಲಂಘಿಸಿ ಬಂದ್ ಮಾಡಿದ್ದಾರೆ. ಹಾಗಾದರೆ ಅಂತಹ ಸಮುದಾಯಕ್ಕೆ ನಮ್ಮ ಪವಿತ್ರ ಕ್ಷೇತ್ರದ ಹೆಸರು ಬಳಸಿಕೊಂಡು ವ್ಯವಹರಿಸುವ ಹಕ್ಕಿಲ್ಲ. ಇಂತಹ ವ್ಯಕ್ತಿಯ ವ್ಯಾವಹಾರಿಕಾ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣಪಂಚಾಯತ್ ಗೆ ಮನವಿ ನೀಡಿದ್ದೇವೆ ಎಂದರು.
