Breaking NewsLatestಕ್ರೈಂರಾಷ್ಟ್ರೀಯಸುದ್ದಿ

ಬಾಂಬ್ ಎಸೆದು ಪರಾರಿಯಾಗಿದ್ದ ಬುರ್ಖಾಧಾರಿ ಮಹಿಳೆ ಅರೆಸ್ಟ್!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್ ಪಿಎಫ್ ಕ್ಯಾಂಪ್‌ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದ ಬುರ್ಖಾಧಾರಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಪೋರ್‌ನಲ್ಲಿರುವ ಭದ್ರತಾ ಪಡೆಗಳ ಬಂಕರ್‌ಗೆ ಮಹಿಳೆ ಬಾಂಬ್‌ ಎಸೆದಿದ್ದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಬಂಧಿತ ಮಹಿಳೆಯನ್ನು ಬಾರಾಮುಲ್ಲಾ ನಿವಾಸಿ ಹಸೀನಾ ಅಖ್ತರ್ ಎಂದು ಗುರುತಿಸಲಾಗಿದೆ.

ಆಕೆಯ ವಿರುದ್ಧ ಈಗಾಗಲೇ ಯುಎಪಿಎ ಅಡಿಯಲ್ಲಿ ಮೂರು ಪ್ರಕರಣಗಳನ್ನು ಎದುರಿಸುತ್ತಿದ್ದಾಳೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಹಸೀನಾ ಅಖ್ತರ್‌ ಮಹಿಳೆಯರ ನಿಷೇಧಿತ ಪ್ರತ್ಯೇಕತಾವಾದಿ ಗುಂಪು ದುಖ್ತರನ್ ಇ ಮಿಲ್ಲತ್‌ನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ. ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಹಸೀನಾ ಅಖ್ತರ್‌ ಬಿಡುಗಡೆಯಾಗಿದ್ದಳು ಎಂದು ತಿಳಿಸಿರುವ ಪೊಲೀಸರು, ಪೆಟ್ರೋಲ್ ಬಾಂಬ್ ದಾಳಿ ನಡೆದ ಕೂಡಲೇ ಮಹಿಳೆಯನ್ನು ಗುರುತಿಸಲಾಗಿತ್ತು ಎಂದಿದ್ದಾರೆ.

ಆದರೆ, ಎರಡು ದಿನಗಳ ಕಾಲ ಪೊಲೀಸರಿಗೆ ಸಿಗದೇ ಮಹಿಳೆ ಚಳ್ಳೆ ಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದಳು. ಬಾಂಬ್‌ ಎಸೆದ ಘಟನೆಯ ಬಳಿಕ ಮಹಿಳೆ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಳು. ಆದರೆ, ಗುರುವಾರ ಸೋಪೋರ್ ಪೊಲೀಸರು ಅವಳನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿರುವ ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್, ಮಹಿಳೆಯ ಪತಿ ಕೂಡ ಈ ಹಿಂದೆ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದ. ಅವನನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಲಾಗಿತ್ತು ಎಂದು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button