Breaking NewsLatestರಾಜ್ಯಸುದ್ದಿ
ಸುಮಲತಾ ಎದುರು ನಿಖಿಲ್ ಕುಮಾರಸ್ವಾಮಿ ಸ್ವರ್ಧೆ: ಹೆಚ್ ಡಿ ಕೆ

ಮುಂದಿನ ಲೋಕಸಭೆ ಚುನಾವಣೆ ವೇಳೆ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನೇ ನಿಲ್ಲಿಸುವ ಯೋಚನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ ಡಿ ಕೆ ಇಂದಿನ ಅವರ ಹೇಳಿಕೆಗಳನ್ನ ನಾನು ಗಮನಿಸಿದ್ದೇನೆ. ನಮ್ಮ ಬಗ್ಗೆ ಅವರು ಆಡಿರುವ ಮಾತುಗಳಿಗೆ ಮಂಡ್ಯ ಜಿಲ್ಲೆಯ ಜನರೇ ಉತ್ತರ ನೀಡುತ್ತಾರೆ. ಈ ಬಗ್ಗೆ ನನಗೆ ನಂಬಿಕೆ ಇದೆ ಎಂದಿದ್ದಾರೆ.
ಅಂದು ಕುತಂತ್ರ ರಾಜಕಾರಣದಿಂದ ನಿಖಿಲ್ ಕುಮಾರಸ್ವಾಮಿಯನ್ನ ಸೋಲಿಸಿದರು. ಅವರ ಹೇಳಿಕೆಯನ್ನು ನೋಡಿದಾಗ ನಾನು ನಿಖಿಲ್ ನನ್ನು ಸುಮಲತಾ ವಿರುದ್ಧ ನಿಲ್ಲಿಸುವ ಮನಸ್ಸಾಗಿದೆ. ಈ ಬಗ್ಗೆ ಯೋಚನೆ ಮಾಡುತ್ತೇನೆ ಎಂದಿದ್ದಾರೆ.
