ಆಹಾರಲೈಫ್ ಸ್ಟೈಲ್

ಶುಂಠಿ ತಂಬುಳಿ ಸೇವಿಸಿ ರುಚಿ ಜೊತೆ ಆರೋಗ್ಯಕ್ಕೂ ಒತ್ತು ಕೊಡಿ

ತಂಬುಳಿಗಳು ನಮ್ಮ ದಿನ ನಿತ್ಯದ ಅಡುಗೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಊಟದ ಮೊದಲಿಗೆ ಸ್ವಲ್ಪ ಅನ್ನದ ಜೊತೆಯಲ್ಲಿ ತಂಬುಳಿ ತಿಂದರೆ ಆರೋಗ್ಯದ ಜೊತೆಗೆ ಪಚನ ಶಕ್ತಿಗೂ ಸಹಾಯಕವಾಗುತ್ತೆ. ಹಾಗಾದ್ರೆ ಇವತ್ತು ಶುಂಠಿ ತಂಬುಳಿ ಮಾಡೋದು ಹೇಗೆ ಅನ್ನೋದನ್ನ ಹೇಳ್ತಿವಿ ನೋಡಿ.

• ಒಂದು ಸಣ್ಣ ಕಪ್ ಚಿಕ್ಕದಾಗಿ ಹೆಚ್ಚಿದ ಶುಂಠಿ
• 1/2 ಕಪ್ ಕಾಯಿ ತುರಿ
• 1/2 ಕಪ್ ಮೊಸರು
• 1 ಟೇಬಲ್ ಸ್ಪೂನ್ ತುಪ್ಪ
• 1 ಟೇಬಲ್ ಸ್ಪೂನ್ ಜೀರಿಗೆ
• 1/2 ಟೇಬಲ್ ಸ್ಪೂನ್ ಕಾಳು ಮೆಣಸು
• 1/2 ಟೇಬಲ್ ಸ್ಪೂನ್ ಉಪ್ಪು
ಒಗ್ಗರಣೆಗೆ:
• 1 ಟೇಬಲ್ ಸ್ಪೂನ್ ತುಪ್ಪ
• 1/2 ಟೇಬಲ್ ಸ್ಪೂನ್ ಜೀರಿಗೆ
• 1/4 ಟೇಬಲ್ ಸ್ಪೂನ್ ಸಾಸಿವೆ
ಮಾಡುವ ವಿಧಾನ: ದಪ್ಪ ತಳದ ಪಾತ್ರೆಗೆ ಸ್ಪಲ್ಪ ತುಪ್ಪ ಹಾಕಿಕೊಳ್ಳಿ. ಅದಕ್ಕೆ ಜೀರಿಗೆ, ಮೆಣಸು, ಕರಿಬೇವು ಹಾಗೂ ಹಸಿ ಶುಂಠಿಯನ್ನ ಹಾಕಿ ಹುರಿದುಕೊಳ್ಳಿ. ಶುಂಠಿ ಚೆನ್ನಾಗಿ ಘಮಘಮಿಸುವವರೆಗೂ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಬಳಿಕ ಕಾಯಿತುರಿ ಹಾಕಿ ಸಂಪೂರ್ಣ ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಜೊತೆಗೆ ಉಪ್ಪು ಹಾಗೂ ಮೊಸರನ್ನು ಹಾಕಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ತಂಬುಳಿಗೆ ಒಗ್ಗರಣೆ ಹಾಕಿ ಅನ್ನದ ಜೊತೆ ಸವಿಯಿರಿ, ಈ ಶುಂಠಿ ತಂಬುಳ್ಳಿ ಬಾಯಿಗೂ ರುಚಿ ದೇಹಕ್ಕೂ ಉತ್ತಮವಾಗಿದೆ.

Related Articles

Leave a Reply

Your email address will not be published. Required fields are marked *

Back to top button