Breaking NewsLatestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಪೊಲೀಸ್ ವಾಹನ ಅಪಘಾತ ಪ್ರಕರಣ: ಇಬ್ಬರು ಅಧಿಕಾರಿಗಳ‌ ಅಮಾನತು

ಹುಬ್ಬಳ್ಳಿ: ಸಾರಿಗೆ ನಿಯಮ ಉಲ್ಲಂಘನೆ ಮಾಡಿ ಅಡ್ಡಾದಿಡ್ಡಿ ಓಡಾಡುವ ವಾಹನಗಳಿಗೆ ದಂಡ​ ಹಾಕಬೇಕಾದ ಪೊಲೀಸರೇ ಇಲಾಖೆಯ ವಾಹನವನ್ನು ಕುಡಿದ ಮತ್ತಿನಲ್ಲಿ ಬ್ಯಾರಿಕೇಡ್​ಗೆ ಗುದ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಉತ್ತರ ಸಂಚಾರಿ ಠಾಣೆಯ ಎಎಸ್​ಐ ಉದಯ್ ದೊಡ್ಡಮನಿ ಹಾಗೂ ಸಶಸ್ತ್ರ ಮೀಸಲು ಪಡೆಯ ಮುತ್ತು ಮಾಗಿಯವರನ್ನು ಈಗ ಅಮಾನತು ಮಾಡಲಾಗಿದೆ. ಹೋಳಿ ಹಬ್ಬದ ದಿನದಂದು ಭದ್ರತೆ ನೀಡುವ ನಿಟ್ಟಿನಲ್ಲಿ ವಾಣಿಜ್ಯ ನಗರಿಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆ ದಿನ ಕರ್ತವ್ಯ ನಿರ್ವಹಣೆ ಬಳಿಕ ಮುತ್ತು ಮಾಗಿ, ಉದಯ್ ದೊಡ್ಡಮನಿ ಹೈವೆ ಪೆಟ್ರೋಲಿಂಗ್ ವಾಹನವನ್ನು ತೆಗೆದುಕೊಂಡು ನಗರದ ಹೊರವಲಯಕ್ಕೆ ತೆರಳಿದ್ದರು.

ಮುತ್ತು ಮಾಗಿ ಕುಡಿದ ಮತ್ತಿನಲ್ಲಿ ವಾಹನವನ್ನು ಬ್ಯಾರಿಕೇಡ್​ಗೆ ಗುದ್ದಿ ಅಪಘಾತ ಮಾಡಿದರು. ಅಪಘಾತದಲ್ಲಿ ಮುತ್ತು ಮಾಗಿ ಮತ್ತು ಉದಯ್​ ದೊಡ್ಡಮನಿ ಗಂಭೀರ ಗಾಯಗೊಂಡಿದ್ದರು. ಘಟನೆಯ ಬಳಿಕ ತನಿಖೆ ನಡೆಸಿದ ಪೊಲೀಸ್​ ಅಧಿಕಾರಿಗಳು, ಈ ಇಬ್ಬರು ಪೊಲೀಸರು ಕರ್ತವ್ಯಲೋಪ ಎಸಗಿದ್ದು ತಿಳಿದು ಬಂದಿದ್ದು.

ತನಿಖಾ ವರದಿ ಬಂದ ಬಳಿಕ ಈಗ ಇಬ್ಬರನ್ನೂ ಅಮಾನತು ಮಾಡಿ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಆದೇಶ ಹೊರಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button