
ಚೆನ್ನೈ: ಸಿನಿ ಇಂಡಸ್ಟ್ರಿಯಲ್ಲಿ ಸ್ಟಾರ್ ವಾರ್ ಕಾಮನ್. ಇನ್ನು ಫ್ಯಾನ್ಸ್ ಗಳ ಕಿತ್ತಾಟ ಕೂಡ ಇವತ್ತು ನಿನ್ನೆಯದಲ್ಲ. ಅದೆಷ್ಟೋ ಬಾರಿ ಈ ಸ್ಟಾರ್ ವಾರ್ ಫ್ಯಾನ್ಸ್ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಇದೆ. ಇದೀಗ ಟಾಲಿವುಡ್ ಸ್ಟಾರ್ ಗಳಾದ ವಿಜಯ್ ಹಾಗೂ ಅಜಿತ್ ಕುಮಾರ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಂಡಿದ್ದಾರೆ.
ವಿಜಯ್ ಹಾಗೂ ಅಜಿತ್ ಫ್ಯಾನ್ಸ್ ನಡುವಿನ ವಾರ್ ಇಂದು ನಿನ್ನೆಯದಲ್ಲ. ಸಾಕಷ್ಟು ಬಾರಿ ಈ ಕಲಾವಿದರ ಅಭಿಮಾನಿಗಳು ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದು ಇದೀಗ ಈ ಕಿತ್ತಾಟ ಮತ್ತೆ ಮುಂದುವರೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಪರಸ್ಪರ ನಿಂದಿಸಿಕೊಂಡಿದ್ದಾರೆ. ವಿಜಯ್ ನಟನೆಯ ಬೀಸ್ಟ್ ಸಿನಿಮಾ ಏಪ್ರಿಲ್ 13 ರಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಅಜಿತ್ ಅಭಿಮಾನಿಗಳು ಅಣಕ ಮಾಡಿದ್ದಾರೆ.
ವಿಜಯ್ ಆತ್ಮಕ್ಕೆ ಶಾಂತಿ ಎಂದು ಟ್ರೆಂಡ್ ಮಾಡಿಕೊಂಡು ಅವರ ಮೃತದೇಹದಂತೆ ಫೋಟೋ ಹಾಕಿ ಹೀಯಾಳಿಸಿದ್ದಾರೆ. ಇತ್ತ ವಿಜಯ್ ಅಭಿಮಾನಿಗಳು ಅಜಿತ್ ಗೆ ಏಡ್ಸ್ ಖಾಯಿಲೆ ಇದೆ ಎಂದು ಹ್ಯಾಶ್ ಟ್ಯಾಗ್ ಮಾಡಿ ಟ್ರೆಂಡ್ ಮಾಡಿದ್ದಾರೆ. ಒಟ್ನಲ್ಲಿ ಈ ಇಬ್ಬರೂ ಸ್ಟಾರ್ ಗಳ ಫ್ಯಾನ್ಸ್ ಕಿತ್ತಾಟಕ್ಕೆ ಸದ್ಯಕ್ಕಂತೂ ಕೊನೆ ಇಲ್ಲದಂತಾಗಿದೆ.




