ಮತ್ತೆ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಕರೀನಾ ಕಪೂರ್

ಬಾಲಿವುಡ್ ನಟಿ ಕರೀನಾ ಕಪೂರ್ ಸ್ವಲ್ಪ ದಿನ ಸಿನಿಮಾದಿಂದ ದೂರ ಉಳಿದು ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಇದೀಗ ಅವರು ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.ಅದು ಓಟಿಟಿ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಲು ಬರುತ್ತಿದ್ದಾರೆ.
ಹೌದು ಕರೀನಾ ಕಪೂರ್ ಅವರಿಗೆ ಎರಡನೇ ಮಗು ಹುಟ್ಟಿದ ನಂತರ ಬಣ್ಣದ ಲೋಕದಿಂದ ದೂರ ಉಳಿದಿದ್ದರು. ಇದ್ದರಿಂದ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಇದೀಗ ಮತ್ತೆ ಅವರು ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಕರೀನಾ ಅವರು ಸುಜೋಯ್ ಘೋಷ್ ಆಕ್ಷನ್ ಕಟ್ ಹೇಳಲಿರುವ ಚಿತ್ರದಲ್ಲಿ ನಟಿಸಲಿದ್ದಾರೆ.ಈ ಕುರಿತು ಕರೀನಾ ಇನ್ಸ್ ಸ್ಟಾಗ್ರಾಮ್ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಟ್ರೀಟ್ ಎಂಟರ್ ಟೈಮೆಂಟ್ ಮತ್ತು ನಾರ್ದರ್ನ್ ಲೈಟ್ಸ್ ಫಿಲ್ಮ್ಸ್ ಬೌಂಡ್ಸ್ಕ್ರಿಪ್ಟ್ ಮತ್ತು ಕ್ರಾಸ್ ಪಿಕ್ಚರ್ಸ್ ಸಹಯೋಗದೊಂದಿಗೆ ಸುಜೋಯ್ ಘೋಷ್ ನಿರ್ದೇಶಿಸಿದ್ದಾರೆ. ಈ ಸಿನಿಮಾವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಅಂದಹಾಗೆ ಕರಿನಾ ನಟಿಸುತ್ತಿರುವ ಸಿನಿಮಾ ಜಪಾನಿ ಲೇಖಕ ಕೀಗೊ ಹಿಗಾಶಿನೊ ಅವರ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್ ಕೃತಿಯಾಗಿದೆ. ಈ ಸುಜೋಯ್ ಘೋಷ್ ಪರದೆ ಮೇಲೆ ತರಲು ಪ್ರಯತ್ನ ಮಾಡಿದ್ದಾರೆ. ಈ ಸಿನಿಮಾಗೆ ಇನ್ನೂ ಟೈಟಲ್ ಇಟ್ಟಿಲ್ಲ. ಶೀಘ್ರದಲ್ಲೇ ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ.
