Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ಮಾರ್ಚ್ 16ರ ಮಧ್ಯರಾತ್ರಿ ನಾನು ಊರಲ್ಲಿ ಇರಲಿಲ್ಲ: ವೈರಲ್ ಆಯ್ತು ಪುನೀತ್ ವಿಡಿಯೋ, ಕಣ್ಣೀರಿಟ್ಟ ಅಭಿಮಾನಿಗಳು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ನಾಳೆ. ಈ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಲು ಈ ಬಾರಿ ಪುನೀತ್ ನಮ್ಮೊಂದಿಗಿಲ್ಲ. ಪುನೀತ್ ಇಲ್ಲ ಎನ್ನುವ ಕಟು ಸತ್ಯದ ನಡುವೆಯೇ ಅಭಿಮಾನಿಗಳು ಅಪ್ಪು ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡ್ತಿದ್ದಾರೆ.

ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಹಲವು ಸಾಮಾಜಿಕ ಕೆಲಸಗಳನ್ನು ಮಾಡಲು ಅಭಿಮಾನಿಗಳು ಭರದ ಸಿದ್ದತೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಪುನೀತ್ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಹೇಳಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಪ್ಪು ಅಂದು ಹೇಳಿದ ವಿಡಿಯೋ ಸಂದೇಶ ಅಭಿಮಾನಿಗಳ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನೀತ್ ರಾಜ್ ಕುಮಾರ್ ನಿವಾಸದ ಬಳಿ ಪ್ರತಿವರ್ಷ ಅಭಿಮಾನಿಗಳು ಅಪ್ಪು ಬರ್ತಡೇ ಸೆಲೆಬ್ರೇಟ್ ಮಾಡಿ ಸಂಭ್ರಮಿಸುತ್ತಿದ್ದರು. ಮಧ್ಯರಾತ್ರಿಯವರೆಗೂ ಬರ್ತಡೇ ಆಚರಿಸುತ್ತಿದ್ದರು. ಆದರೆ ಈ ಬಾರಿ ಪುನೀತ್ ಬರ್ತಡೇ ಸಂಭ್ರಮಿಸೋಕೆ ನಮ್ಮೊಂದಿಗಿಲ್ಲ. ಇದೇ ಸಂದರ್ಭದಲ್ಲಿ ಪುನೀತ್ ಹೇಳಿದ ವಿಡಿಯೋವೊಂದ ವೈರಲ್ ಆಗಿದೆ.

ಮಾರ್ಚ್ 16ರ ಮದ್ಯರಾತ್ರಿ ಯಾರು ಮನೆ ಬಳಿ ಬರಬೇಡಿ. ನಾನು ಊರಲ್ಲಿ ಇರುವುದಿಲ್ಲ. ಮಾರ್ಚ್ 17ರ ಬೆಳಗ್ಗೆ ಬರುತ್ತೇನೆ ಎಂದು ವಿಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಹೇಳಿದ್ದರು. ಇದನ್ನ ಎಡಿಟ್ ಮಾಡಿ ಅಭಿಮಾನಿಗಳು ಕಣ್ಣಿರು ಹಾಕುತ್ತಿರುವ ವಿಡಿಯೋವನ್ನ ಸೇರಿಸಲಾಗಿದೆ. ಈ ವಿಡಿಯೋ ನೋಡಿ ಅಭಿಮಾನಿಗಳು ಮತ್ತಷ್ಟು ಕಣ್ಣೀರು ಹಾಕ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button