Breaking NewsLatestರಾಜ್ಯಸುದ್ದಿ

ವರ್ಕ್ ಫ್ರಮ್ ಹೋಮ್ ಬಿಟ್ಟು ಕಚೇರಿಗೆ ಹಿಂದಿರುಗುವಂತೆ ಒತ್ತಾಯ

ದೇಶದಲ್ಲಿ ಕೊರೊನಾ ಮಹಾಮಾರಿ ತಾಂಡವವಾಡಿದ್ದರಿಂದ ಆತಂಕಗೊಂಡು ಎಲ್ಲ ಕಂಪನಿಗೂ ವರ್ಕ್ ಫ್ರಮ್ ಹೋಮ್ ನೀಡಲಾಗಿತ್ತು. ಇದೀಗ ಕೊರೊನಾ ಕಡಿಮೆಯಾಗಿದ್ದರಿಂದ ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳು ಕಚೇರಿಗಳಿಗೆ ಹಿಂದಿರುಗುವಂತೆ ಪ್ರೋತ್ಸಾಹಿಸಬೇಕೆಂದು ಪ್ರತಿಷ್ಠಿತ ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್.‌ ನಾರಾಯಣಮೂರ್ತಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರ್ಕ್‌ ಫ್ರಮ್‌ ಹೋಮ್‌ ನಿಂದ ಪರಿಶ್ರಮದಿಂದ ಕೆಲಸ ಮಾಡುವ ಸಂಸ್ಕೃತಿಯನ್ನು ಬೆಳೆಸುವುದು, ಉದ್ಯೋಗಿಗಳಲ್ಲಿ ಕಲ್ಪನೆ, ಶ್ರೇಷ್ಠತೆ, ಅರ್ಹತೆ, ಅಂತಃಪ್ರಜ್ಞೆ ಜೊತೆಗೆ ಯಾವುದೇ ವಿಷಯಗಳ ಕುರಿತು ಚರ್ಚಿಸುವ ಹಾಗೂ ಚರ್ಚೆ ನಡೆಸುವ ಪ್ರವೃತ್ತಿಗಳನ್ನು ಬೆಳೆಸುವುದು ಅತ್ಯಂತ ಕಷ್ಟಕರವಾಗುತ್ತಿದೆ. ಸಾಂಕ್ರಾಮಿಕ ರೋಗದ ಕೆಟ್ಟ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡುವುದು ಅಗತ್ಯವಾಗಿದ್ದರೂ, ಉತ್ಪಾದಕತೆಯನ್ನು ಹೆಚ್ಚಿಸುವ ಸಲುವಾಗಿ ಕಾರ್ಪೋರೇಟ್‌ ಡೆನಿಜನ್‌ಗಳ ಕಚೇರಿಗೆ ಹಿಂತಿರುಗಬೇಕೆಂದು ನಾರಾಯಣಮೂರ್ತಿ ಒತ್ತಾಯಿಸಿದರು

Spread the love

Related Articles

Leave a Reply

Your email address will not be published. Required fields are marked *

Back to top button