Breaking NewsLatestಕ್ರೈಂರಾಷ್ಟ್ರೀಯವಿದೇಶಸುದ್ದಿ

ರಷ್ಯಾ ಉಕ್ರೇನ್ ಯುದ್ಧ: ಹೆರಿಗೆ ಆಸ್ಪತ್ರೆ ಛಿದ್ರ, ಮೇಯರ್ ಕಿಡ್ನಾಪ್, 549 ನಾಗರಿಕರ ಸಾವು!

  • ಹೌದು ರಷ್ಯ ಸೇನೆ ಉಕ್ರೇನ್ ಆಸ್ಪತ್ರೆ, ವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿದೆ. ರಷ್ಯಾ ಸೇನೆ ಆಸ್ಪತ್ರೆ ಸೇರಿದಂತೆ ಹೆರಿಗೆ ಆಸ್ಪತ್ರೆಗಳು ಛಿದ್ರವಾಗಿವೆ. ಅಲ್ಲದೆ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿದ್ದು, ರಷ್ಯಾ ಸೇನೆಯ ವಿರುದ್ಧ ಉಕ್ರೇನ್ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಉಕ್ರೇನ್‌ನ ಮೈಕೋಲೈವ್‌ನ ಕ್ಯಾನ್ಸರ್ ಆಸ್ಪತ್ರೆ ಮೇಲೆ ದಾಳಿ ಮಾಡಿದೆ. ರಷ್ಯಾ ಶೆಲ್ ದಾಳಿಯ ವೇಳೆ ರೋಗಿಗಳು ಆಸ್ಪತ್ರೆಯಲ್ಲಿದ್ದು, ನೂರಾರು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಷ್ಯಾ ಶೆಲ್ ದಾಳಿಯಲ್ಲಿ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು, ಅನೇಕರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ. ಆದ್ರೆ ಯಾವುದೇ ಪ್ರಾಣಾಪಾಯವಾಗಿಲ್ಲವೆಂದು ಉಕ್ರೇನ್ ನ್ಯೂಸ್ ಬ್ಯೂರೋ ಮಾಹಿತಿ ನೀಡಿದೆ.
  • ಇನ್ನು ಉಕ್ರೇನ್‌ನ ಮೆಲಿಟೊಪೋಲ್ ಮೇಯರ್​ನ್ನು ರಷ್ಯಾ ಸೇನೆ ಕಿಡ್ನ್ಯಾಪ್ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಇದು ಐಸಿಸ್ ಉಗ್ರ ಸಂಘಟನೆ ಮಾಡುವ ಕೆಲಸದಂತಿದೆ ಎಂದು ಹೇಳಿದ್ದಾರೆ. ರಷ್ಯಾ ಪರಮಾಣು ಸುರಕ್ಷತಾ ನಿಯಮ ಉಲ್ಲಂಘಿಸುತ್ತಿದೆ ಎಂದು ರಷ್ಯಾ ಸೇನೆಯ ವಿರುದ್ಧ ಅಮೆರಿಕ ಆರೋಪ ಮಾಡಿದೆ.
  • ಇನ್ನು ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಹಿನ್ನೆಲೆ ಉಕ್ರೇನ್‌ನಲ್ಲಿ ಈವರೆಗೆ 549 ನಾಗರಿಕರು ಸಾವನ್ನಪ್ಪಿದ್ದಾರೆ. ಯುದ್ಧದಲ್ಲಿ 957ಕ್ಕೂ ಹೆಚ್ಚು ನಾಗರಿಕರಿಗೆ ಗಾಯವಾಗಿದೆ. ಸುಮಾರು 25 ಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್ ತೊರೆದಿದ್ದಾರೆ. ಯುದ್ಧದ ಭೀಕರತೆ ದಿನೇ ದಿನೇ ಹೆಚ್ಚುತ್ತಿದೆ. ರಷ್ಯಾ ಸರಪಟಾಕಿಯಂತೆ ಶೆಲ್ ದಾಳಿ ನಡೆಸುತ್ತಲೇ ಇದೆ.
Spread the love

Related Articles

Leave a Reply

Your email address will not be published. Required fields are marked *

Back to top button