ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೀನಾಯ ಸೋಲು; ಡಿ.ಕೆ ಸುರೇಶ್ ಸ್ಪಷ್ಟನೆ

ರಾಮನಗರದ: ದೇಶದ ಜನ ಕಾಂಗ್ರೆಸ್ ಮೇಲಿನ ವಿಶ್ವಾಸ ಕಡಿಮೆ ಮಾಡಿದ್ದಾರೆ. ಇದರ ಬಗ್ಗೆ ಪಕ್ಷದ ನಾಯಕರು ಚರ್ಚೆ ಮಾಡ್ತಾರೆ.ಚುನಾವಣೆಯಲ್ಲಿ ಸೋಲು – ಗೆಲುವು ಸಾಮಾನ್ಯ.ಎಲ್ಲಾ ಚುನಾವಣೆಗಳು ಒಂದೇ ರೀತಿ ಇರುವುದಿಲ್ಲ ಎಂದು ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಡಿ.ಕೆ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ನಲ್ಲಿ ನಮ್ಮ ಪಕ್ಷದಲ್ಲಿ ಗೊಂದಲ ಉಂಟಾಯಿತು. ಸಿಎಂ ಆಗಿದ್ದವರು ಬಿಜೆಪಿಗೆ ಹೋದ್ರು, ಇದೆಲ್ಲವೂ ಸಮಸ್ಯೆ ಆಯ್ತು ಎಂದರು.ಕರ್ನಾಟಕದಲ್ಲಿ ಕಾಂಗ್ರೆಸ್ ಕುಗ್ಗಿದೆ ಎನ್ನೋದು ಸುಳ್ಳು. ರಾಜ್ಯದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ನಮ್ಮಲ್ಲಿ ಬಿಜೆಪಿ ಗೆಲವು ಪರಿಣಾಮ ಬೀರಲ್ಲ. ಮತ್ತೆ ಎದ್ದು ಬರುವ ಸಾಮರ್ಥ್ಯ ನಮಗಿದೆ, ಈ ಬಗ್ಗೆ ಯಾರಿಗೂ ಆತಂಕ ಬೇಡವೆಂದ ಅವರು,ಜನ ಬಿಜೆಪಿ ವಿರುದ್ಧ ಬೇಸತ್ತಿದ್ದಾರೆ, ಮಾಧ್ಯಮಗಳು ವಸ್ತುಸ್ಥಿತಿಯನ್ನ ತೋರಿಸಬೇಕೆಂದರು.
ಈಗಲ್ ಟನ್ ರೆಸಾರ್ಟ್ ವಿವಾದ
ಸದನದಲ್ಲಿ ಸಿದ್ದರಾಮಯ್ಯ – ಕುಮಾರಸ್ವಾಮಿ ವಾಗ್ವಾದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, ದಂಡ ಹೆಚ್ಚಾಗಿ ಹಾಕಿರುವುದಕ್ಕೆ ಅವರಿಗೆ ಏನು ತೊಂದರೆ ಆಗಿದೆ. ಅವರೇ 27 ಎಕರೆ ಸರ್ಕಾರಿ ಜಾಗವನ್ನ ಸರ್ಕಾರಕ್ಕೆ ಬರೆಸಿಕೊಟ್ಟರೆ ಸಂತೋಷವೆಂದರು.
ರೈತರು ಕಷ್ಟದಲ್ಲಿರುವ ಬಗ್ಗೆ ಮಾತನಾಡಿದ್ದರೆ ಉತ್ತರ ಕೊಡುತ್ತಿದ್ದೆ,ಅವರ ಬಣ್ಣ ಬಯಲಾಗಿರುವ ಸಂದರ್ಭದಲ್ಲಿ ನಾನೇಕೆ ಮಾತನಾಡಬೇಕೆಂದು ಪ್ರಶ್ನಿಸಿದ ಅವರು, ಯಾರದ್ದೋ ಪರವಾಗಿ ಮಾತನಾಡಿದ್ದಾರೆ. ಕಾನೂನಿನ ಪ್ರಕಾರವಾಗಿ ದಂಡ ವಿಧಿಸಿದ್ದಾರೆ ಎಂದರು.ಜಿಲ್ಲಾಧಿಕಾರಿ – ಸರ್ಕಾರ ತೀರ್ಮಾನ ಮಾಡಿದೆ. ರೆಸಾರ್ಟ್ ನವರು ಯಾವ ರೇಟ್ ಗೆ ಸೈಟ್ ಮಾಡಿದ್ದರು. ಅದರ ಆಧರದ ಮೇಲೆ ದಂಡ ವಿಧಿಸಿದ್ದಾರೆ.ಇದರಲ್ಲಿ ಪಕ್ಷ – ನಾಯಕರ ಪಾತ್ರ ಏನು ಇಲ್ಲ. ಮುಖ್ಯಮಂತ್ರಿ ಗೆ ಹೇಳಿ ಬರೆಸಿಕೊಡಲಿ, ಅದಕ್ಕೆ ನಮ್ಮ ತಕರಾರಿಲ್ಲವೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದರು.
