ಕೋಲಾರ

ಪ್ರೀತಿಸಿ ಕೈಹಿಡಿದವ 5 ವರ್ಷಗಳ ಬಳಿಕ ಜಾತಿ ನೆಪವೊಡ್ಡಿ ಕೈಕೊಟ್ಟ 

ಕೋಲಾರ: ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾದ ಬಳಿಕ ಜಾತಿ ನೆಪವೊಡ್ಡಿ ಪ್ರೀತಿಸಿದಾಕೆ ಹಾಗೂ ಇಬ್ಬರು ಮಕ್ಕಳನ್ನ ಬಿಟ್ಟು ಮತ್ತೊಂದು ಮದುವೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಅಂಕಂಡಹಳ್ಳಿ ಗ್ರಾಮದ ಕಾವ್ಯಾ ಎಂಬ ಯುವತಿಯನ್ನು ಬಂಗಾರಪೇಟೆ ತಾಲ್ಲೂಕಿನ ದೊಡ್ಡ ಚಿನ್ನ ಹಳ್ಳಿ ಗ್ರಾಮದ ಸುನಿಲ್ ಎಂಬಾತ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಅಂತರ್ ಜಾತಿ‌ ಮದುವೆಯಾದ ಕಾರಣ ಯುವಕನ ಮನೆಯವರು ದಂಪತಿಯನ್ನು ಮನೆಗೆ ಸೇರಿಸಿಕೊಳ್ಳದ ಕಾರಣ ಸುನಿಲ್ ಮತ್ತು ಕಾವ್ಯ, ಯುವತಿಯ ಮನೆಯಲ್ಲೇ ಉಳಿದಿದ್ದರು.

ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ ೪ ವರ್ಷದ ಹಾಗೂ ೯ ತಿಂಗಳ ಎರಡು ಗಂಡು ಮಕ್ಕಳಾಗಿವೆ. ಈ ಮಧ್ಯೆ ಸುನಿಲ್ ತನ್ನ ತಾಯಿಯ ಮನೆಗೆ ಹೋಗಿ ಬರುತ್ತಿದ್ದು, ಮನೆಯವರ ಮಾತು ಕೇಳಿರುವ ಸುನಿಲ್ ಮತ್ತೊಂದು ಮದುವೆಯಾಗಿದ್ದಾನೆ ಎಂದು ಗೃಹಿಣಿ ಆರೋಪಿಸಿದ್ದಾಳೆ.

ಗಂಡ ಒಂದು ತಿಂಗಳಾದರೂ ಮನೆಗೆ ಬಾರದ ಕಾರಣ ಪತಿಯ ಮನೆ ಎದುರು ತನ್ನನ್ನು ಮನೆಗೆ ಸೇರಿಸಿಕೊಳ್ಳುವಂತೆ ಯುವತಿ ಯುವಕನ ಪೋಷಕರನ್ನು ಬೇಡಿಕೊಂಡಿದ್ದಾರೆ. ಗಂಡನ ಮನೆಯವರು ಮನೆಯೊಳಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಇದರಿಂದ ನೊಂದ ಮಹಿಳೆ ಕೆಲಕಾಲ ಗಂಡನ ಮನೆ ಎದುರು ಪ್ರತಿಭಟನೆ ಮಾಡಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾಳೆ.

್ಗಂತಗ67ಡ ಸುನಿಲ್ ಮದುವೆಯಾಗಿ ಮೋಸ ಮಾಡಿದ್ದು, ಜಾತಿ ನೆಪದಲ್ಲಿ ನನ್ನನ್ನು ನಿರಾಕರಿಸುತ್ತಿದ್ದಾನೆ ಎಂದು ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

Related Articles

Leave a Reply

Your email address will not be published. Required fields are marked *

Back to top button