Breaking NewsLatestಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ

ಈಜಲು ಹೋದರು ಮೂವರು, ಇಬ್ಬರು ನೀರು ಪಾಲು, ಓರ್ವ ಪಾರು!

ಹುಬ್ಬಳ್ಳಿ : ರಾಜ್ಯಾದ್ಯಾಂತ ಕಳೆದ ಬಾರಿ ಬಿದ್ದ ಬಾರಿ ಮಳೆಗೆ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ನೀರು ಕಂಡರೆ ಮೋಜು ಮಾಡುವ ಮನಸ್ಸು ಎಲ್ಲರಿಗೂ ಆಗುತ್ತೆ. ಅದೇ ರೀತಿ ತುಂಬಿದ ಚೆಂದದ ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ಶವವಾಗಿ ಹೋಗಿದ್ದಾರೆ. ಈಜಲೆಂದು ಕೆರೆಗೆ ಇಳಿದ ಮೂವರು ಹುಡುಗರು ಆಳವನ್ನ ಗಮನಿಸಿದೆ ಮುಂದೆ ಮುಂದೆ ಹೋಗಿದ್ದಾರೆ. ನಂತ್ರ ನೀರಿನಲ್ಲಿ ಕಾಲು ಹೂತು ಹೋಗಿದೆ. ಹೀಗಾಗಿ ನೀರಿನಿಂದ ಆಚೆಗೆ ಬರಲಾಗದೆ ನೀರಿನಲ್ಲಿಯೇ, ಉಸಿರು ಕಟ್ಟಿ ಇಬ್ಪರು ಪ್ರಾಣ ಬಿಟ್ಟಿದ್ದಾರೆ. ಓರ್ವನನ್ನ ಸ್ಥಳೀರು ಪಾರು ಮಾಡಿದ್ದಾರೆ. ಇಂತಹದ್ದೊಂದು ದುರಂತ ಘಟನೆ ಹುಬ್ಬಳ್ಳಿ ಹೊರವಲಯದ ಬುಡ್ನಾಳ ಕೆರೆಯಲ್ಲಿ ನಡೆದಿದೆ. ಸುದ್ದಿ ತಿಳಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತರ ಶವಗಳನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದೆ.‌

ಹಳೇ ಹುಬ್ಬಳ್ಳಿಯ ನೇಕಾರ ನಗರದ ವಿಜಯ ಸಿದ್ದಪ್ಪ ಕಾಂಬಳೆ (೨೫) ಹಾಗೂ ರಾಘವೇಂದ್ರ ತೆಗ್ಗಿಮನಿ, (೨೪) ಮೃತ ಯುವಕರೆಂದು ಗುರುತಿಸಲಾಗಿದೆ. ಕಳೆದ ಭಾನುವಾರದಂದು ಒಟ್ಟು ಮೂವರು ಯುವಕರು ಬುಡ್ನಾಳ ಕೆರೆಗೆ ಈಜಲು ತೆರಳಿದ್ದರಂತೆ. ಆದರಲ್ಲಿ ಓರ್ವ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇನ್ನಿಬ್ಬರು ಯುವಕರು ನೀರಿನಲ್ಲಿ ಮುಳುಗಿ‌ ನಾಪತ್ತೆಯಾಗಿದ್ದರಿಂದ ಸ್ಥಳಿಯರಿಗೆ ರಕ್ಷಣೆ ಮಾಡಲು ಆಗಿರಲಿಲ್ಲವಂತೆ. ಕೂಡಲೇ ಸ್ಥಳಿಯರು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.‌

ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ, ಧಾರವಾಡ ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ ಭಂಡಾರಿ ಆವರ ಮಾರ್ಗದರ್ಶನದಲ್ಲಿ ಅಗ್ನಿ ಶಾಮಕದಳದ  ಠಾಣಾಧಿಕಾರಿ ಎಂ.ಆರ್. ಹತ್ತರಕಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇಂದು ಮಧ್ಯಾಹ್ನದ ನಂತರ ಇಬ್ಬರು ಯುವಕರ ಶವ ಪತ್ತೆ ಮಾಡುವಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸದ್ಯ ಇಬ್ಬರು ಯುವಕರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿ‌ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.‌

Spread the love

Related Articles

Leave a Reply

Your email address will not be published. Required fields are marked *

Back to top button