Breaking NewsLatestರಾಷ್ಟ್ರೀಯವಿದೇಶಸುದ್ದಿ

ಲೈವ್​ನಲ್ಲೇ ರಾಜೀನಾಮೆ ನೀಡಿ ಹೊರ ಬಂದ ಚಾನಲ್​ ಸಿಬ್ಬಂದಿಗಳು

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವನ್ನ ವಿರೋಧಿಸಿ ರಷ್ಯಾದ ಟಿವಿ ಚಾನಲ್ ಒಂದರ ಎಲ್ಲಾ ಎಲ್ಲಾ ಸಿಬ್ಬಂದಿಗಳು ಲೈವ್​​ನಲ್ಲಿಯೇ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. `ಯುದ್ಧ ಬೇಡ’ ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಕೊನೆಯದಾಗಿ ಪ್ರಸಾರ ಮಾಡಿ ಎಲ್ಲರೂ ನೇರ ಪ್ರಸಾರದಲ್ಲೇ ರಾಜೀನಾಮೆ ನೀಡಿ ಕಚೇರಿಯಿಂದ ಹೊರನಡೆದಿದ್ದಾರೆ. ಉಕ್ರೇನ್ ವಿರುದ್ಧದ ರಷ್ಯಾ ಯುದ್ಧವನ್ನು ಪ್ರಸಾರ ಮಾಡದಂತೆ ರಷ್ಯಾ ಅಧಿಕಾರಿಗಳು ಚಾನಲ್​ಗೆ ನಿರ್ಭಂದ ಹೇರಿದ್ದರಿಂದ ಸಿಬ್ಬಂದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಸುದ್ದಿ ವಾಹಿನಿಯ ಸಂಸ್ಥಾಪಕ ನಟಾಲಿಯಾ ಸಿಂಡೇವಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ʼಯುದ್ಧ ಬೇಡʼ ಎಂಬ ಸುದ್ದಿಯನ್ನು ಕೊನೆಯದಾಗಿ ಪ್ರಸಾರ ಮಾಡಿ ಎಲ್ಲಾ ಸಿಬ್ಬಂದಿ ಸಾಮೂಹಿಕವಾಗಿ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಅನಿರ್ದಿಷ್ಟಾವಧಿವರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button