Breaking NewsLatestರಾಷ್ಟ್ರೀಯಸುದ್ದಿ

ಬಿಹಾರದ ಮೂರು ಅಂತಸ್ತಿನ ಕಟ್ಟಡ ಸ್ಫೋಟ;ಐವರು ಸಾವು

ಬಿಹಾರ: ಭಗಲ್ ಪುರ ಜಿಲ್ಲೆಯ ಮೂರು ಅಂತಸ್ತಿನ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮವಾಗಿ ಐವರು ಸಾವನ್ನಪ್ಪಿದ್ದು, 8 ಮಂದಿಗೆ ಗಾಯವಾಗಿದೆ.

ಈ ಘಟನೆಯಲ್ಲಿ ಕಟ್ಟಡದ ಅವಶೇಷಗಳಡಿಯಲ್ಲಿ 15 ಮಂದಿ ಸಿಲುಕಿಕೊಂಡಿದ್ದರು. ಕೂಡಲೇ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿ ಕಟ್ಟಡದಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.ಗಾಯಗೊಂಡವರನ್ನು ಜೆಎಲ್ ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ಸ್ಫೋಟದಿಂದ ಕಟ್ಟಡದ ಪಕ್ಕದಲ್ಲಿರುವ ಮೂರು ಬಿಲ್ಡಿಂಗ್​ಗೆ ಹಾನಿಯಾಗಿದೆ. ಈ ಕಟ್ಟಡ ಮೊಹಮ್ಮದ್ ಯುಸುಫ್ ಎಂಬುವರಿಗೆ ಸೇರಿದೆ ಎನ್ನಲಾಗಿದೆ. ಇವರು ಪಟಾಕಿ ಬ್ಯುಸಿನೆಸ್ ಮಾಡುತ್ತಿದ್ದು, ಪಟಾಕಿ ಸ್ಫೋಟದಿಂದ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button