Breaking NewsLatestಜಿಲ್ಲಾ ಸುದ್ದಿರಾಜ್ಯಸುದ್ದಿ
ಉಕ್ರೇನ್ ನಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳು

ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವು ಸಂಭವಿಸಿದ ಬೆನ್ನಲ್ಲೆ ಭಾರತೀಯರನ್ನು ಮರಳಿ ಕರೆತರುವ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಭಾರತದ ವಿದ್ಯಾರ್ಥಿ ಹಾಗೂ ನಾಗರಿಕರನ್ನು ಮರಳಿ ಕರೆತರಲಾಗಿದ್ದು ಈಗ ಮತ್ತಷ್ಟು ವಿಮಾನಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.ಉಕ್ರೇನ್ ಮತ್ತು ರಷ್ಯಾ ನಡುವೆ ಬಿಕ್ಕಟ್ಟ ಮತ್ತೆ ಮುಂದುವರೆದಿದೆ. ಉಕ್ರೇನ್ನ ಮಹಾನಗರಗಳಲ್ಲಿಯೂ ರಷ್ಯಾ ಪಡೆಗಳು ದಾಳಿ ನಡೆಸಿವೆ. ಇದೀಗ ಉಕ್ರೇನ್ ನಿಂದ ಕರ್ನಾಟಕದವರು ಬೆಂಗಳೂರಿಗೆ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 6 ಮಂದಿ ಆಗಮಿಸಿದ್ದಾರೆ. ಬೆಂಗಳೂರಿನ 5 ವಿದ್ಯಾರ್ಥಿಗಳು ಹಾಗೂ ಹೈದರಾಬಾದ್ನ ಓರ್ವ ವಿದ್ಯಾರ್ಥಿ ಅವರು ಬಂದು ಇಳಿದಿದ್ದಾರೆ. ಅಲಿಷಾ ಸೈದ್, ಭಾವನಾ ರಾಜಣ್ಣ, ಅಫ್ನಾ ಸಬ್ನಾ, ಆರ್ಯನ್ ರಾವತ್, ಧನಂಜಯ್, ಮಹಮ್ಮದ್ ಫೈಸಲ್ ದೆಹಲಿಯಿಂದ ಆಗಮಿಸಿದ ವಿದ್ಯಾರ್ಥಿಗಳು.
