‘ಭೀಮ್ಲಾ ನಾಯಕ್’ ನಿರ್ದೇಶಕರ ಮೇಲೆ ನಟಿ ನಿತ್ಯಾ ಮೆನನ್ ಅಸಮಾಧಾನ

ಮೂರು ವರ್ಷಗಳ ಬಳಿಕ ಪವನ್ ಕಲ್ಯಾಣ್ ನಟನೆಯ ಸಿನಿಮಾ ರಿಲೀಸ್ ಆಗಿದ್ದು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಎಲ್ಲೆಡೆಯೂ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು ಕಲೆಕ್ಷನ್ನಲ್ಲಿ ಕಮಾಲ್ ಮಾಡ್ತಿದೆ. ಆದ್ರೆ ಚಿತ್ರದ ನಟಿ ನಿತ್ಯಾ ಮೆನನ್ ಮಾತ್ರ ಚಿತ್ರತಂಡದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಭೀಮ್ಲಾ ನಾಯಕ್ ಸಿನಿಮಾದಲ್ಲಿ ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದು ಪವನ್ ಪತ್ನಿಯಾಗಿ ನಿತ್ಯ ಮೆನನ್ ಕಾಣಿಸಿಕೊಂಡಿದ್ದಾರೆ. ಆದ್ರೆ ಚಿತ್ರದಲ್ಲಿ ನಿತ್ಯಾ ಮೆನನ್ ಹೆಚ್ಚು ಹೊತ್ತು ಕಾಣಿಸಿಕೊಂಡಿಲ್ಲ. ಇದು ನಿತ್ಯಾ ಮೆನನ್ ಬೇಸರಕ್ಕೆ ಕಾರಣ ಎನ್ನಲಾಗ್ತಿದೆ.

ಭೀಮ್ಲಾ ನಾಯಕ್ ಸಿನಿಮಾ ಮಲಯಾಳಂನ ಸೂಪರ್ ಹಿಟ್ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದ ರಿಮೇಕ್. ಮಲಯಾಳಂನಲ್ಲಿ ಅಣ್ಣ ರೇಷ್ಮಾ ರಾಜನ್ ನಟಿಸಿದ್ದ ಪಾತ್ರವನ್ನ ತೆಲುಗಿನಲ್ಲಿ ನಿತ್ಯಾ ಮೆನನ್ ನಿರ್ವಹಿಸಿದ್ದಾರೆ.

ಮೂಲ ಸಿನಿಮಾದಲ್ಲಿ ಪೊಲೀಸ್ ಪತ್ನಿಯ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಆದರೆ, ‘ಭೀಮ್ಲಾ ನಾಯಕ್’ ಚಿತ್ರದಲ್ಲಿ ಆ ರೀತಿ ಆಗಿಲ್ಲ. ನಿತ್ಯ ಮೆನನ್ರನ್ನ ಇಲ್ಲಿ ಅತಿಥಿ ಪಾತ್ರದಲ್ಲಿ ತೋರಿಸುವಂತೆ ತೋರಿಸಲಾಗಿದೆ. ಈ ಕಾರಣಕ್ಕೆ ನಿತ್ಯಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ನಿತ್ಯಾ ಮೆನನ್ ಭೀಮ್ಲಾ ನಾಯಕ್ ಸಿನಿಮಾದ ಯಾವುದೇ ಪೋಸ್ಟ್ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಚಿತ್ರದಲ್ಲಿ ತಮಗೆ ಹೆಚ್ಚಿನ ಮಹತ್ವ ನೀಡಿಲ್ಲ ಅನ್ನೋದೆ ಇದಕ್ಕೆ ಕಾರಣ ಎನ್ನಲಾಗ್ತಿದೆ.

ಈ ಹಿಂದೆ ತ್ರಿವಿಕ್ರಂ ನಿರ್ದೇಶನದ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ನಿತ್ಯಾಗೆ ಇದೇ ಅನುಭವ ಆಗಿತ್ತು. ಭೀಮ್ಲಾ ನಾಯಕ್ ಹಾಗೂ ಸನ್ ಆಫ್ ಸತ್ಯಮೂರ್ತಿ ಎರಡು ಸಿನಿಮಾವನ್ನ ನಿರ್ದೇಶನ ಮಾಡಿದ್ದು ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್.




