ಜಿಲ್ಲಾ ಸುದ್ದಿರಾಮನಗರ

ಬಿಜೆಪಿ-ಕಾಂಗ್ರೇಸ್​ ಒಂದೇ ನಾಣ್ಯದ ಎರಡು ಮುಖಗಳು: ಹೆಚ್​ಡಿಕೆ

ರಾಮನಗರ: ಮತಕ್ಕಾಗಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಎರಡು ರಾಷ್ಟ್ರೀಯ ಪಕ್ಷಗಳೇ ರಾಜ್ಯದಲ್ಲಿ ಕೋಮು ಸೌಹಾರ್ಧತೆ ಹಾಳಾಗಲು ನೇರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಒಂದೇ ನಾಣ್ಯದ ಎರಡು ಮುಖಗಳು, ನಾನು ಇವರಲ್ಲಿ ಯಾರ ಪರವೂ ಇಲ್ಲ, ನಾನು ಯಾವತ್ತಿದ್ದರೂ ಜನತೆ ಪರವಾಗಿದ್ದೇನೆ ಎಂದರು. ಸಮವಸ್ತ್ರದ ವಿಚಾರವಾಗಿ ಆರಂಭವಾದ ಘಟನೆ ಇಡೀ ರಾಜ್ಯದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಇದರಿಂದ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸಲಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದ ಎರಡು ಅವಧಿಯಲ್ಲೂ ಹಿಂದೂ-ಮುಸ್ಲಿಂ ಗಲಾಟೆಯಾಗಲು ಬಿಟ್ಟಿಲ್ಲ. ಆದರೆ ಇವತ್ತು ಯಾಕೆ ಇಂತಹ ಇಶ್ಯೂಗಳು ರೈಸ್ ಆಗುತ್ತಿವೆ ಎಂದರು.

ರಾಜ್ಯದಲ್ಲಿ ಬಿಜೆಪಿ ಮತ್ತು‌ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಇಂತಹ ಘಟನೆಗಳು ಏಕೆ ಉದ್ಭವವಾಗುತ್ತದೆ ಎಂದು ಪ್ರಶ್ನಿಸಿದ ಅವರು, ಶಿವಮೊಗ್ಗದ ಘಟನೆ ಇರಬಹುದು‌ ಅಥವಾ ಮತ್ಯಾವುದೇ ಘಟನೆ ಇರಬಹುದ ಇದಕ್ಕೆಲ್ಲ ಯಾರು ಹೊಣೆ? ಏಕೆ ಈ ರೀತಿಯ ವಾತಾವರಣ ನಿರ್ಮಾಣ ಆಗುತ್ತಿದೆ. ಇವತ್ತು ಹಲವಾರು ರೀತಿಯ ವಿಧೇಯಕ ರಚನೆ ಮಾಡಿ ಆ ಒಂದು ಕಾನೂನು ಸಮಾಜದಲ್ಲಿ ಕಲುಷಿತ ವಾತಾವರಣಕ್ಕೆ ತೆಗೆದುಕೊಂಡು ಹೋಗಲು ದಾರಿ ಮಾಡಿಕೊಟ್ಟಿದೆ. ಇದಕ್ಕೆ ಹಲವಾರು ಉದಾಹರಣೆ ಕೊಡಬಲ್ಲೆ. ಆದರೆ, ಕಾಂಗ್ರೆಸ್‍ನ ನಾಯಕರು ಈ ವಿಚಾರ ಚರ್ಚೆ ಮಾಡಲ್ಲ ಎಂದು ಅಸಮಾಧನಾ ಹೊರಹಾಕಿದರು.

ಕಾಂಗ್ರೆಸ್‍ಗೆ ಏನಿದ್ದರೂ ಜೆಡಿಎಸ್ ಬಗ್ಗೆ ಚರ್ಚೆ ಮಾಡುವುದೇ ಕೆಲಸವಾಗಿದೆ. ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎನ್ನುತ್ತಾರೆ. ಇವತ್ತು ಸಮಾಜದ ಈ ಕೆಟ್ಟ ಪರಿಸ್ಥಿತಿಗೆ ನಿಮ್ಮ ಕೊಡುಗೆ ಏನು? ಕಾಂಗ್ರೆಸ್‍ನವರು ಏನು ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಕಾಂಗ್ರೆಸ್‍ನವರು ನಾವು ಅಲ್ಪಸಂಖ್ಯಾತ ರಕ್ಷಕರು ಅಂತ ಹೇಳಿಕೊಂಡು ಪೋಸು ಕೊಡುತ್ತಾರೆ. ಆದರೆ ಇವತ್ತು ಡಿಜೆ ಹಳ್ಳಿ ಘಟನೆಗೆ ಕಾರಣಕರ್ತರು ಯಾರು? ಡಿಜೆ ಹಳ್ಳಿಯಲ್ಲಿ ಬೆಂಕಿ ಹಚ್ಚಿದವರು ಯಾರು? ಹಲವಾರು ಅಮಾಯಕರನ್ನ ಪ್ರೇರೇಪಣೆ ಮಾಡಿ ದೊಂಬಿ ಮಾಡಿಸಲಾಯಿತು. ದೊಂಬಿ ಮಾಡಿಸಿದವರು ಕಾಂಗ್ರೆಸ್​ನ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರಿಗೆ ಕಾಂಗ್ರೆಸ್‍ನವರು ರಕ್ಷಣೆ ಕೊಟ್ಟಿದ್ದಾರೆ. ಇವರ ಮಾತು ಕೇಳಿದ ಅಮಾಯಕರು ಬಲಿಯಾಗಿದ್ದಾರೆ. ಇವರನ್ನು ನಂಬಿಕೊಂಡು ಅಮಾಯಕ ಮಂದಿ ಇವತ್ತು ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button