ನಾವು ಕೊಚ್ಚಿ ಕೊಲ್ಲಲು ಆರಂಭಿಸಿದರೆ ಹರಿ, ಹರ, ಬ್ರಹ್ಮ ಬಂದರೂ ತಡೆಯಲು ಆಗುವುದಿಲ್ಲ: ಕಾಳಿ ಸ್ವಾಮೀಜಿ

ಶಿವಮೊಗ್ಗದಲ್ಲಿ ಭಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆಯ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈಗಾಗ್ಲೆ ಕೆಲವು ಆರೋಪಿಗಳನ್ನ ಬಂಧಿಸಲಾಗಿದೆ. ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸದೆ ಬಿಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈ ಮಧ್ಯೆ ಕೊಲೆಗಡುಕರಿಗೆ ಮಾಜಿ ಬಿಗ್ಬಾಸ್ ಸ್ಪರ್ಧಿ ಕಾಳಿ ಸ್ವಾಮೀಜಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಾಳಿ ಸ್ವಾಮೀಜಿ ಮುಂದಾಳತ್ವದಲ್ಲಿ ನಿನ್ನೆ ಹರ್ಷ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆ ಬಳಿಕ ಮಾತನಾಡಿದ ಕಾಳಿ ಸ್ವಾಮಿ ಹಿಜಾಬ್, ಬುರ್ಖಾ ವಿಷಯಕ್ಕೆ ನನ್ನ ಮಗನನ್ನು ಕೊಂದಿದ್ದೀರ. ನ್ಯಾಯಾಲಯ ಕೊಟ್ಟರೆ ತಗೋಳ್ಳಿ, ಆದರೆ ನಮ್ಮ ಮನೆ ಮಕ್ಕಳನ್ನು ಕೊಚ್ಚಿ ಕೊಚ್ಚಿ ಕೊಲ್ಲಲು ಬರ್ತಿದ್ದೀರಿ ಅಂದರೆ ನಾವು ಸುಮ್ಮನಿರಲ್ಲ. ನಾವು ಕೊಚ್ಚಿ ಕೊಲ್ಲಲು ಆರಂಭಿಸಿದರೆ ಹರಿ, ಹರ, ಬ್ರಹ್ಮ ಬಂದರೂ ನಮ್ಮನ್ನು ತಡೆಯಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಹಿಂದೂ ಧರ್ಮದ ರಕ್ಷಣೆಗೆ ಬದ್ಧ ಎಂದು ಮೈಸೂರು ಮಹಾರಾಜರು ಹೇಳಿಕೆ ನೀಡಿದ್ದರು. ಹಿಂದುಗಳೆಲ್ಲ ಒಂದಾಗಿ ಏನೇ ಕಷ್ಟ ಬಂದರೂ ಸಹಿಸಿಕೊಳ್ಳಿ ಎಂದಿದ್ದರು. ಆದರೆ ಈ ಕಷ್ಟವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಹರ್ಷನ ಮನೆಗೆ ನಿಮ್ಮಂದ ಏನಾದರೂ ಸಹಾಯ ಆಗಲೇ ಬೇಕು. ಅವರದ್ದು ಬಡ ಕುಟುಂಬ. ಆತನ ಕುಟುಂಬದ ಬ್ಯಾಂಕ್ ಖಾತೆ ಸಂಖ್ಯೆ ನಿಮಗೆ ಸಿಗುತ್ತದೆ. ಅವರಿಗೆ ಸಹಾಯ ಮಾಡಿ ಎಂದು ಕಾಳಿ ಸ್ವಾಮಿ ಮನವಿ ಮಾಡಿದ್ದಾರೆ.
ಕಾಳಿ ಸ್ವಾಮೀಜಿ ಹೇಳಿಕೆಗೆ ವ್ಯಾಪಕ ವಿರೋಧ ಕೇಳಿ ಬರ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕಾಳಿ ಸ್ವಾಮೀಜಿ ಹೇಳಿಕೆಯ ಕುರಿತು ಅಸಮಧಾನ ಹೊರಹಾಕಿರುವ ನೆಟ್ಟಿಗರು ಸೂಕ್ಷ್ಮ ಪರಿಸ್ಥಿತಿಯಲ್ಲಿ ಇಂತಹ ಹೇಳಿಕೆಗಳು ಸಮಂಜಸವಲ್ಲ. ಕಾಳಿ ಸ್ವಾಮೀಜಿ ಹೇಳಿಕೆಗಳು ಜನರನ್ನು ಹಿಂಸೆಗೆ ಪ್ರೇರೇಪಿಸುತ್ತದೆ. ಹೀಗಾಗಿ ಅವರು ವಿರುದ್ಧ ದೂರು ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
