ಮಳೆ ಹನಿಯೇ.. ಸಾಂಗ್ ನಲ್ಲಿ ಮುತ್ತಿನ ಸುರಿಮಳೆ; ಪಡ್ಡೆಹುಡುಗರಿಗೆ ಮತ್ತೇರಿಸಿದ ಧೀರೇನ್- ಮಾನ್ವಿತಾ

ದೊಡ್ಮನೆಯ ಮತ್ತೊಬ್ಬ ಪ್ರತಿಭೆ ಪೂರ್ಣಿಮಾ ಮತ್ತು ರಾಮ್ ಕುಮಾರ್ ಪುತ್ರ ಧೀರೇನ್ ಚಂದನವನಕ್ಕೆ ಕಾಲಿಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಮೊದಲ ಬಾರಿಗೆ ಹೀರೊ ಆಗಿ ಸ್ಯಾಂಡಲ್ ವುಡ್ ಎಂಟ್ರಿಕೊಡುತ್ತಿರುವ ಸಿನಿಮಾ ಶಿವ 143. ಅಪ್ಪನ ಹಾಗೆ ಹ್ಯಾಂಡ್ ಸಮ್ ಆಗಿರುವ ಧೀರೇನ್ ಅವರ ಸಿನಿಮಾ ಕುರಿತು ಭಾರಿ ನಿರೀಕ್ಷೆ ಸೃಷ್ಟಿಹಾಕಿದೆ. ಈ ಚಿತ್ರ ಸೆಟ್ಟೇರಿದಾಗಿಂದಲೂ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.
ಈ ಚಿತ್ರದಲ್ಲಿ ಧೀರೇನ್ ಗೆ ನಾಯಕಿಯಾಗಿ ಮಾನ್ವಿತಾ ಕಾಮತ್ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಸಿನಿಮಾ ಬಿಡುಗಡೆಗೆ ಅಣಿಯಾಗಿದೆ. ಇತ್ತೀಚೆಗೆ ಚಿತ್ರತಂಡ ಪ್ರೇಮಿಗಳ ದಿನದಂದು ಒಂದು ರೊಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಿದ್ದು, ಪಡ್ಡೆಹುಡುಗರನ್ನು ಮತ್ತೇರಿಸುವಂತೆ ಮಾಡಿದೆ. ಈ ಹಾಡಿನಲ್ಲಿ ಧೀರೇನ್ ಮತ್ತು ಮಾನ್ವಿತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ ಈ ಚಿತ್ರದ ಮೊದಲ ವಿಡಿಯೋ ಸಾಂಗ್ ಮಳೆ ಹನಿಯೇ… ಮಳೆ ಹನಿಯೇ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಇಬ್ಬರು ಮುತ್ತಿನ ಮಳೆಯನ್ನೇ ಸುರಿಸಿದ್ದಾರೆ. ಮೊದಲ ಬಾರಿಗೆ ಮಾನ್ವಿತಾ ಲಿಪ್‌ಲಾಕ್ ಮಾಡಿದ್ದಾರೆ. ಈ ಹಿಂದೆ ಹಾಡಿನ ಒಂದು ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾಗಲೇ, ಈ ಸಾಂಗ್ ಸಖತ್ ಬೋಲ್ಡ್ ಆಗಿರಲಿದೆ ಎಂದು ಪ್ರೇಕ್ಷಕರು ಊಹಿಸಿದ್ದರು. ಅಂದುಕೊಂಡಂತೆ ಈ ಸಿನಿಮಾ ಆಕ್ಷನ್ ಜೊತೆಗೆ ರೊಮ್ಯಾಂಟಿಕ್ ಮೂಡಿಬಂದಿದೆ ಎಂಬುದಕ್ಕೆ ಈ ಹಾಡು ಸುಳಿವು ನೀಡಿದೆ.
ಇನ್ನು ಈ ‘ಮಳೆ ಹನಿಯೇ..’ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಕ್ರಾಂತಿ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ನಿಹಾಲ್ ಮತ್ತು ಪೃಥ್ವಿ ಭಟ್ ಹಾಡಿದ್ದಾರೆ.ಈ ಸಿನಿಮಾಗೆ ಅನಿಲ್‌ಕುಮಾರ್ ನಿರ್ದೇಶನ ಮಾಡಿದ್ದಾರೆ. ಜಯಣ್ಣ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಈ ಚಿತ್ರಕ್ಕೆ ಜಯಣ್ಣ, ಭೋಗೇಂದ್ರ ಮತ್ತು ಡಾ. ಸೂರಿ ಬಂಡವಾಳ ಹೂಡಿದ್ದಾರೆ.



