ಪ್ರೇಮಿಗಳ ದಿನಕ್ಕೆ ರಿಲೀಸ್ ಆಯ್ತು ಮ್ಯಾಟ್ನಿ ಟೀಸರ್

ಚಂದನವನದಲ್ಲಿ ಪ್ರೇಮಿಗಳ ದಿನದ ಸಂಭ್ರಮ ಸಡಗರ ಜೋರಾಗಿಯೇ ಇದೆ. ಕನ್ನಡದ ಹಲವು ಸಿನಿಮಾಗಳು ಇಂದು ಸಿನಿಮಾದ ಪೋಸ್ಟರ್, ಸಾಂಗ್ ಟೀಸರ್ ಬಿಡುಗಡೆ ಮಾಡಿದೆ. ಇದೀಗ ಸ್ಯಾಂಡಲ್ವುಡ್ನ ಹಿಟ್ ಜೋಡಿ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ನಟನೆಯ ಮ್ಯಾಟ್ನಿ ಸಿನಿಮಾದ ರೊಮ್ಯಾಂಟಿಕ್ ಟೀಸರ್ ಬಿಡುಗಡೆಯಾಗಿದೆ.
2018ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ ಅಯೋಗ್ಯ ಚಿತ್ರದ ಬಳಿಕ ರಚಿತಾ ರಾಮ್ ಹಾಗೂ ಸತೀಶ್ ನಟನೆಯ ಮ್ಯಾಟಿ ಸಿನಿಮಾ ಶುರುವಾಗಿದೆ. ಈ ಹಿಟ್ ಜೋಡಿಯನ್ನ ತೆರೆ ಮೇಲೆ ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮಧ್ಯೆ ಚಿತ್ರತಂಡ ಪ್ರೇಮಿಗಳ ದಿನವಾದ ಇಂದು ಮ್ಯಾಟ್ನಿ ಟೀಸರ್ ರಿಲೀಸ್ ಮಾಡಿದೆ.
ಮನೋಹರ್ ಕಪ್ಪಳ್ಳಿ ನಿರ್ದೇಶನದ ಮ್ಯಾಟ್ನಿ ಸಿನಿಮಾದ ಟೀಸರ್ ಸಖತ್ ರಿಚ್ ಆಗಿ ಮೂಡಿ ಬಂದಿದ್ದು ಪ್ರತಿಯೊಬ್ಬರ ಗಮನ ಸೆಳೆಯುತ್ತಿದೆ. ಮ್ಯಾಟ್ನಿ ಟೀಸರನ್ನು ವ್ಯಾಲೆಂಟೈನ್ಸ್ ಡೇಗೆ ಬಿಡುಗಡೆ ಮಾಡಬೇಕು ಎಂದು ಮೊದಲೇ ಚಿತ್ರತಂಡ ಡಿಸೈಡ್ ಮಾಡಿತ್ತಂತೆ. ಅಂದ್ಹಾಗೆ ಮ್ಯಾಟ್ನಿ ಸಿನಿಮಾ ಲವ್ ಸ್ಟೋರಿಯ ಕಥೆಯನ್ನ ಒಳಗೊಂಡಿದ್ದು ಇದರ ಹೊರತು ಇನ್ನೂ ಸಾಕಷ್ಟು ವಿಷಯಗಳಿವೆಯಂತೆ. ಈಗಾಗ್ಲೆ ಸಿನಿಮಾದ 50% ಶೂಟಿಂಗ್ ಕಂಪ್ಲೀಟ್ ಆಗಿದ್ದು ಇನ್ನೂ 3-4 ತಿಂಗಳ ಶೂಟಿಂಗ್ ಭಾಕಿ ಇದೆ.



